ದಿನಾಂಕ 19.01.2019ರಂದು ಶ್ರೀ ಭಾರತೀ ಕಾಲೇಜಿನಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (National Assessment and Acreditation Council)ಯ ಮಾನ್ಯತೆಯನ್ನು ಪಡೆಯುವ ಸಲುವಾಗಿ ಅದರ ಮಾನದಂಡ(ಅಡಿiಣeಡಿiಚಿ)ಗಳ ಕುರಿತು ಉಪನ್ಯಾಸಕರಿಗೆ ಮಾಹಿತಿ ನೀಡುವುದಕ್ಕಾಗಿ ಒಂದು ದಿನದ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ವಿವೇಕಾನಂದ ಕಾಲೇಜಿನ ಐಕ್ಯೂಎಸಿಯ ಸಂಯೋಜಕರಾದ ಡಾ. ಶ್ರೀಧರ್ ಹೆಚ್.ಜಿ., ಮತ್ತು ಇಂಗ್ಲೀಷ್ ಉಪನ್ಯಾಸಕರಾದ ಶ್ರೀ ಗಣೇಶ್ ಪ್ರಸಾದ್ ಇವರು ಆಗಮಿಸಿ ಪ್ರಾತ್ಯಕ್ಷಿಕೆಯ ಮೂಲಕ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಕಾಲೇಜು ನ್ಯಾಕ್ ಮಂಡಳಿಯ ಸಂಯೋಜಕಿ ಶ್ರೀಮತಿ ಶರ್ಮಿಳಾ ಪಿ. ನಾಯಕ್ ಇವರು ಸ್ವಾಗತಿಸಿ, ಪ್ರಾಂಶುಪಾಲರಾದ ಡಾ. ಈಶ್ವರ ಪ್ರಸಾದ್ ಎ ವಂದಿಸಿದರು.