SSLC ಮತ್ತು ದ್ವಿತೀಯ PUC ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಸನ್ನದ್ಧರಾಗುವ ಬಗ್ಗೆ ಮಾಹಿತಿ

ನಮ್ಮ ಸಂಸ್ಥೆಯ SSLC ಮತ್ತು ದ್ವಿತೀಯ PUC ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಸನ್ನದ್ಧರಾಗುವ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಸೇವಾ ಸಮಿತಿಯ ಕೋಶಾಧಿಕಾರಿಗಳಾದ ಶ್ರೀ ಉದಯಶಂಕರ ನೀರ್ಪಾಜೆಯವರು ಮಾತನಾಡಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ SSLC ಮತ್ತು  PUC ಪರೀಕ್ಷೆಗಳು ಬುನಾದಿಯಾಗಿವೆ.ಈ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಿ ತಯಾರಾಗಬೇಕು, ಹೆತ್ತವರಿಗೆ ಹಾಗೂ ವಿದ್ಯಾಭ್ಯಾಸ ಪಡೆದ ಸಂಸ್ಥೆಗೆ ಒಳ್ಳೆಯ ಹೆಸರು ತರುವಂತಾಗಬೇಕು ಎಂದರು.
ಪ್ರಾಂಶುಪಾಲರಾದ ಗಂಗಾರತ್ನ ಅವರು ಮಾತನಾಡಿ, ಮಕ್ಕಳು ಓದಿನ ಕಡೆ ಹೆಚ್ಚು ಗಮನಹರಿಸಬೇಕು. ರಜೆ ಮಾಡಿ ಮದುವೆ, ಶುಭ ಸಮಾರಂಭ, ಜಾತ್ರೆ, ಉತ್ಸವ ಇತ್ಯಾದಿಗಳಿಗೆ ತೆರಳಬಾರದು. ಪಾಠ, ಪ್ರವಚನಗಳಿಂದ ತಪ್ಪಿಸಿಕೊಳ್ಳಬಾರದು, ಜೊತೆಗೆ ಆರೋಗ್ಯದಿಂದಿರಬೇಕು, ಅದಕ್ಕಾಗಿ ಉತ್ತಮ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.
ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಪ್ರತಿಮ್ ಕುಮಾರ್ ಕೆ.ಎಸ್. ಅವರು ಮಾತನಾಡಿ, ಸಂಸ್ಥೆಯ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವುದಕ್ಕಾಗಿ ತನುಮನಧನಗಳಿಂದ ಸಹಕರಿಸುತ್ತಿದ್ದಾರೆ.ವಿದ್ಯಾರ್ಥಿಗಳು ಅದಕ್ಕೆ ನ್ಯಾಯ ಕೊಡಬೇಕು. ಹೆತ್ತವರ ಕನಸು ನನಸು ಮಾಡಬೇಕು. ಉತ್ತಮ ಭವಿಷ್ಯ ರೂಪಿಸಬೇಕು ಎಂದರು.
Highslide for Wordpress Plugin