Leadership Training Camp “Prerana” 2018-19

ನಂತೂರು ಭಾರತೀ ಸಮೂಹ ಸಂಸ್ಥೆ : ನಾಯಕತ್ವ ತರಬೇತಿ ಶಿಬಿರ, ’ಪ್ರೇರಣ’ ಉದ್ಘಾಟನೆ

ನಂತೂರು ಜು.28 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳಲ್ಲಿ ವಿವಿಧ ಶಾಲೆಗಳ ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿ ನಾಯಕರಿಗೆ ನಾಯಕತ್ವ ತರಬೇತಿ ಶಿಬಿರ ಮತ್ತು ಶಿಕ್ಷಣ ಸಂಯೋಜಕ ಯು.ಎಸ್.ವಿಶ್ವೇಶ್ವರ ಭಟ್ ಅವರ ಮಾರ್ಗದರ್ಶನದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ’ಪ್ರೇರಣ’ವನ್ನು ಉದ್ಘಾಟಿಸಲಾಯಿತು.

ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಕಿಶೋರ್ ರಾವ್ ಉದ್ಘಾಟಿಸಿ, ಮಾತನಾಡಿ, ಯುವಕರ ಭವಿಷ್ಯವನ್ನು ಕಟ್ಟುವ, ನಾಯಕತ್ವ ಗುಣವನ್ನು ಬೆಳೆಸುವ ಯೋಜನೆ ಶ್ಲಾಘನೀಯವಾದುದು. ಬೇರೆ ಬೇರೆ ಶಾಲೆಗಳ ನಾಯಕರನ್ನು ಕರೆಸಿ, ಸಮಸ್ತ ಸಮಾಜದ ಬೆಳವಣಿಗೆಯ ಕಾಳಜಿ ವಿಶೇಷವಾಗಿದೆ. ವಿದ್ಯಾರ್ಥಿಗಳು ನಿರಂತರ ಕ್ರಿಯಾಶೀಲರಾಗಿರಬೇಕು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಛಲ, ಗುರಿಯಿರಬೇಕು. ಸತತ ಪರಿಶ್ರಮದಿಂದ ಮಾತ್ರ ಬೆಳವಣಿಗೆ ಮತ್ತು ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಆಡಳಿತಾಽಕಾರಿ ಪ್ರೊ.ಶಂಕರ ಭಟ್ ಅಧ್ಯಕ್ಷತೆ ವಹಿಸಿ, ಮಾತನಾಡಿ, ಕಾಲೇಜಿನಲ್ಲಿ ವಿಶೇಷವಾಗಿ ತರಬೇತಿ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ತರಬೇತಿ ಎಂಬ ಮೆಟ್ಟಿಲಿನ ಮೂಲಕ ಎತ್ತರಕ್ಕೇರುವ ಅವಕಾಶ ಸಂಸ್ಥೆಯ ಆಡಳಿತ ಮಂಡಳಿ ಅವಕಾಶ ನೀಡಿದೆ. ಇದನ್ನು ಸದುಪಯೋಗ ಪಡಿಸಿ, ಜೀವನದಲ್ಲಿ ಉಳಿಸಿ, ಬೆಳೆಸಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಸೇವಾ ಸಮಿತಿಯ ಶೈಕ್ಷಣಿಕ ಸಂಯೋಜಕ ಯು.ಎಸ್.ವಿಶ್ವೇಶ್ವರ ಭಟ್ ಅವರು ಈ ಶಿಬಿರವನ್ನುಯಶಸ್ವಿಯಾಗಿ ನಡೆಸಿಕೊಟ್ಟರು. ಪ್ರಾಂಶುಪಾಲ ಡಾ.ಎ.ಈಶ್ವರಪ್ರಸಾದ್, ಪಿಯು ಪ್ರಾಂಶುಪಾಲೆ ವಿದ್ಯಾ ಭಟ್ ಉಪಸ್ಥಿತರಿದ್ದರು. ವಿವಿಧ ಶಾಲೆಗಳ ೪೪ ವಿದ್ಯಾರ್ಥಿ ನಾಯಕರು ಭಾಗವಹಿಸಿದ್ದರು.

ವಿದ್ಯಾರ್ಥಿನಿಯರಾದ ಪಲ್ಲವಿ ಸ್ವಾಗತಿಸಿ, ಶ್ರೀಲಕ್ಷ್ಮೀ ಎಸ್.ಭಟ್ ವಂದಿಸಿದರು. ವೈಷ್ಣವಿ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.

ಸಂಜೆ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್ ಶುಭ ಹಾರೈಸಿದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

Highslide for Wordpress Plugin