ದಿನಾಂಕ 03.12.2022ರಂದು ಶ್ರೀ ಭಾರತೀ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ 8ನೇ ತರಗತಿಯ ಪೋಷಕರ ಸಭೆ ನಡೆಯಿತು.
ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಕೋಶಾಧಿಕಾರಿ ಶ್ರೀ ಉದಯಶಂಕರ್ ನೀರ್ಪಾಜೆ ಮಾತನಾಡಿ ಪೋಷಕರು ತಮ್ಮ ಮಕ್ಕಳ ಪ್ರಗತಿಯನ್ನು ಸದಾ ಗಮನಿಸುತ್ತಿರಬೇಕು ಮತ್ತು ಶಿಕ್ಷಕರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಅವರ ಕಲಿಕೆ ಮತ್ತು ನಡೆ ನುಡಿಯ ಬಗ್ಗೆ ವಿಚಾರಿಸುತ್ತಿರಬೇಕು ಎಂದರು.ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟುವುದಕ್ಕೋಸ್ಕರ ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿರಿಸಲು ಸಲಹೆ ನೀಡಿದರು. ವಿದ್ಯಾರ್ಥಿಗಳ ಉತ್ತಮ ನಡತೆಯನ್ನು ಗಮನದಲ್ಲಿರಿಸಿಕೊಂಡು ನಮ್ಮ ಸಂಸ್ಥೆಯಲ್ಲಿ ಕೈಗೊಳ್ಳುತ್ತಿರುವ ಶಿಸ್ತು ಕ್ರಮಗಳ ಕುರಿತು ಪೋಷಕರಿಗೆ ತಿಳಿಸಿದರು.
ಮುಖ್ಯೋಪಾಧ್ಯಾಯಿನಿ ಗಂಗಾರತ್ನ ಮಾತನಾಡಿ ವಿದ್ಯಾರ್ಥಿಗಳ ಪ್ರಗತಿಯು ಅವರ ಸರ್ವತೋಮುಖ ಬೆಳವಣಿಗೆಯಿಂದ ಮಾತ್ರ ಸಾಧ್ಯ, ಪೋಷಕರೂ ಈ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂದರು. ನಂತರ ಮುಂಬರುವ ಶಾಲಾ ವಾರ್ಷಿಕೋತ್ಸವ , ಪರೀಕ್ಷಾ ತಯಾರಿ ಮತ್ತು ಇತರ ಚಟುವಟಿಕೆಗಳ ಕುರಿತು ತಿಳಿಸಿದರು. ಶಿಕ್ಷಣ ಇಲಾಖೆಯಿಂದ ನಡೆದ ಸಭೆಯಲ್ಲಿ ತಿಳಿಸಿರುವಂತೆ ಮೆದುಳು ಜ್ವರದ ನಿಯಂತ್ರಣಕ್ಕೆ ಕೊಡಬೇಕಾದ ಚುಚ್ಚುಮದ್ದು ಲಸಿಕೆಯ ಕುರಿತು ಪೋಷಕರಿಗೆ ವಿವರಿಸಿದರು.
ಈ ಸಭೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಮತ್ತು ಪೋಷಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಇದುವರೆಗೆ ನಡೆದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ಶಿಕ್ಷಕರು ಪೋಷಕರಿಗೆ ತಿಳಿಸಿದರು. ಶಿಕ್ಷಕಿ ನಿಖಿತಾ ಸ್ವಾಗತಿಸಿ, ಶಿಕ್ಷಕಿ ಪವಿತ್ರಾ ಪಿ.ಬಿ ವಂದಿಸಿದರು.
ನಿರ್ಣಯಗಳು:
ಪೋಷಕರು ತಮ್ಮ ಮಕ್ಕಳ ಮೊಬೈಲ್ ಗಳಲ್ಲಿ ಸಾಮಾಜಿಕ ಜಾಲತಾಣಗಳ ಖಾತೆಯನ್ನು ನಿಷ್ಕ್ರಿಯಗೊಳಿಸುವುದು. ಶಾಲಾವಾರ್ಷಿಕೋತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮಗಳ ತಯಾರಿ, ಪರೀಕ್ಷೆ ಮತ್ತು ಇತರ ಚಟುವಟಿಕೆಗಳ ತಯಾರಿ ನಡೆಸುವುದು. “ಸ್ಕೌಟ್ಸ್ – ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ” ಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದು. ಎಂಬಿತ್ಯಾದಿ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಾಲಾಯಿತು.