75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಆಚರಣೆ

ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಸೋಮವಾರ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಆಚರಣೆ ವಿಜೃಂಭಣೆಯಿಂದ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಳೆವಿದ್ಯಾರ್ಥಿ, ಇನ್ವೆಂಜರ್ ಟೆಕ್ನಾಲಜಿಸ್ ಕಂಪೆನಿಯ ಲೀಡ್ ಎನಲಿಸ್ಟ್ ಶ್ರೀ ಕೇಶವಚಂದ್ರ ಕೋಂಬ್ರಾಜೆ ಅವರು ಧ್ವಜಾರೋಹಣಗೈದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ, ನಮ್ಮ ದೇಶಕ್ಕೆ ನಾವೇನು ಕೊಡಬಲ್ಲೆವು ಎಂದು ಯೋಚಿಸಿ ನಿರ್ಧರಿಸಬೇಕು. ಹಾಗೆಯೇ ನಾವು ಕಲಿತ ವಿದ್ಯಾಸಂಸ್ಥೆಯ ಬಗ್ಗೆ ತುಂಬು ಅಭಿಮಾನ ಹೊಂದಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜೀವನ್‌ದಾಸ್ ಅವರು ನಮಗೆ ಸ್ವಾತಂತ್ರ್ಯ ದೊರೆಯಲು ಕಾರಣಕರ್ತರಾದವರನ್ನು ನೆನೆಯುತ್ತಾ ನಾವು ಕೂಡಾ ದೇಶಕ್ಕೆ ನಮ್ಮ ಕೈಲಾದ ಕೊಡುಗೆಯನ್ನು ನೀಡಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಶ್ರೀ ಭಾರತೀ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಂಗಾರತ್ನ, ಸ್ವಾಮಿ ಸದಾನಂದ ಸರಸ್ವತಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ದುರ್ಗಾವತಿ ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಲಯನ್ಸ್ ಕುಡ್ಲದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಂತರ ಪ್ರೌಢಶಾಲೆ, ಪ.ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು.
ಅಮೃತ ಲಕ್ಷ್ಮೀ ಮತ್ತು ಚಹಿತ್ ಸ್ವಾತಂತ್ರ್ಯೋತ್ಸವದ ಕುರಿತು ಭಾಷಣ ಮಾಡಿದರು.
ಶ್ರೀ ಸತೀಶ ಶಾಸ್ತ್ರಿ ಅತಿಥಿಗಳನ್ನು ಪರಿಚಯಿಸಿದರು.
ಉಪನ್ಯಾಸಕಿ ಅನನ್ಯಾ ಸ್ವಾಗತಿಸಿ ಐಶ್ವರ್ಯಾ ವಂದಿಸಿದರು. ಕಾರ್ತಿಕ್ ‌ಕೃಷ್ಣ ನಿರೂಪಣೆಗೈದರು. ಬಳಿಕ ಸಿಹಿ ಹಂಚಲಾಯಿತು.

Highslide for Wordpress Plugin