ರಕ್ತ ದಾನವೇ ಶ್ರೇಷ್ಠ ದಾನ : ಸುಬ್ರಹ್ಮಣ್ಯ ಕಾಶಿಮಠ

ನಂತೂರು, ಮಾ.6 : ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಮತ್ತು ಲಯನ್ಸ್ ಕ್ಲಬ್ ಮಂಗಳೂರು ಹಾಗೂ ಹವ್ಯಕ ಸಭಾ ಮಂಗಳೂರು ಇವರ ಆಶ್ರಯದಲ್ಲಿ ಶ್ರೀ ಭಾರತೀ ಕಾಲೇಜು ನಂತೂರಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೋವರ್ಸ್ ಕ್ರ್ಯ ಹಾಗೂ ರಕ್ತನಿಧಿ ವೆನ್ ಲಾಕ್ ಆಸ್ಪತ್ರೆ ಇದರ ಸಹಕಾರದೊಂದಿಗೆ ದಿನಾಂಕ 06-03-2022 ಭಾನುವಾರದಂದು ನಗರದ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು.

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಹವ್ಯಕ ಸಭಾದ ಅಧ್ಯಕ್ಷ ಶ್ರೀ ಕಾಶಿಮಠ ಅವರು ಸಕಾಲದಲ್ಲಿ ರಕ್ತ ದಾನ ಮಾಡುವುದರಿಂದ ಸಾಮಾನ್ಯ ಮನುಷ್ಯರಿಗೂ ಇತರರ ಜೀವ ಉಳಿಸಲು ಸಾಧ್ಯವಿದೆ. ಕಾಲ ಕಾಲಕ್ಕೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಸಾರ್ಥಕತೆಯ ಜೊತೆಗೆ ನಮ್ಮ ಆರೋಗ್ಯವೂ ವೃದ್ಧಿಸುತ್ತದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲದ ಕಾರಣ ರಕ್ತ ದಾನಿಗಳಿಂದಲೇ ರಕ್ತದ ಪೂರೈಕೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ರಕ್ತದಾನ ಮಾಡಿ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು  ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಹವ್ಯಕ ಸಭಾ ಮಂಗಳೂರು ಇದರ ನಿಯೋಜಿತ ಅಧ್ಯಕ್ಷರಾದ ಡಾ|| ರಾಜೇಂದ್ರ ಪ್ರಸಾದ್ ಇವರು ಮಾತನಾಡಿ ರಕ್ತದಾನ ಮಾಡಲು ದೊಡ್ಡ ಮನಸ್ಸಿದ್ದರೆ ಸಾಕು, ಇತರರ ನೋವು ನಲಿವು, ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ನಿರಂತರ ರಕ್ತದಾನ ಮಾಡಿದಲ್ಲಿ ಸಮಾಜದ ಸ್ವಾಸ್ಥ್ಯವು ವೃದ್ಧಿಸುತ್ತದೆ ಎಂದು ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು.

 

ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂOತಾರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶ್ರೀ ಗಣೇಶ್ ಸುಂದರ್ ಕೆ. ಜಿ ಅವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ವೆನ್ ಲಾಕ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ|| ಜುಲ್ಫಿಕರ್ ಅಹಮ್ಮದ್, ಡಾ|| ಟಿನ್ನು ವೆಂಕಟ್, ರಕ್ತನಿಧಿ ಉಸ್ತುವಾರಿಗಳಾದ ಶ್ರೀ ಅಶೋಕ್ ಮತ್ತು ಆಂತೋನಿ ಡಿ’ಸೋಜಾ  ತಾಂತ್ರಿಕ ಅಧಿಕಾರಿಗಳು ಮತ್ತು ಶ್ರುಶ್ರೂಶಕ ಅಧಿಕಾರಿಗಳು, ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಸತೀಶ್ ರೈ, ಸುಧಾಮ ರೈ, ಲಯನ್ಸ್ ಸದಸ್ಯರಾದ ಶ್ರೀ ಎ. ಜಿ ಶರ್ಮ ಹಾಗೂ ಅನಿತಾ ಬೋಳಂತಕೋಡಿ ಮುಂತಾದವರು ಉಪಸ್ಥಿತರಿದ್ದರು. ವೆನ್ ಲಾಕ್ ಆಸ್ಪತ್ರೆಯ ತಂತ್ರಜ್ಞರು ಮತ್ತು ವೈದ್ಯರು ಈ ಶಿಬಿರವನ್ನು ನಡೆಸಿಕೊಟ್ಟರು. ಶ್ರೀ ಭಾರತೀ ಕಾಲೇಜು ನಂತೂರಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳು ಸೇರಿ ಇತರ 26 ಮಂದಿ ರಕ್ತದಾನ ಮಾಡಿದರು.

Highslide for Wordpress Plugin