ಶ್ರೀ ಭಾರತೀ ಪದವಿಪೂರ್ವ ಕಾಲೇಜಿನಲ್ಲಿ ದಿ. 23.10.2021ರಂದು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ನೇತಾಜಿ ಸುಭಾಸ್‌ಚಂದ್ರಬೋಸ್‌ರವರ ಬಗ್ಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಾದ ಸುಮಂತ್, ಚಿನ್ಮಯ, ಹರ್ಷಿತಾ, ಶ್ರೇಯಸ್, ದೀಕ್ಷಾ, ಅಂಕಿತಾ, ತನುಸ್ವಿ, ಲಿಖಿತ್ ಇವರು ನೇತಾಜಿಯವರ ಜೀವನ ಹಾಗೂ ಸಾಧನೆಗಳ ಕುರಿತು ಮಾತನಾಡಿದರು.
ಚಿರಾಗ್, ಮನ್ವಿತ್, ಶ್ರೇಯಾ, ವೈಭವಿ, ನಿರೀಕ್ಷಾ, ಅನ್ವಿತ್, ಧೀರಜ್, ಕಾರ್ತಿಕ್, ಅಕ್ಷಯ್ – ನೇತಾಜಿಯವರಿಗೆ ಸಂಬಂಧಿಸಿದ ವಿವಿಧ ರೀತಿಯ ಸ್ಲೋಗನ್‌ಗಳನ್ನು ಪ್ರಸ್ತುತಪಡಿಸಿದರು.
ಪ್ರಾಂಶುಪಾಲೆ ಗಂಗಾರತ್ನ ನಾಯಕತ್ವ ಗುಣದ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಂತರ ನೇತಾಜಿಯವರ ಕುರಿತು ವಿಶೇಷ ವಿಡಿಯೋವನ್ನು ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಯೋಜಕಿ ಜಯಂತಿ.ಕೆ, ಲೆಕ್ಕಪರಿಶೋಧಕ ಜಯರಾಮ್, ಶಿಕ್ಷಕಿಯರಾದ ಭಾರತೀ ಮತ್ತು ಶ್ವೇತಾ ಭಾಗವಹಿಸಿದ್ದರು.
ವಿದ್ಯಾರ್ಥಿನಿ ಅಂಕಿತಾ ನಿರೂಪಣೆಗೈದಳು.