ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 10ನೇ ತರಗತಿಯ ಪೋಷಕರ ಸಭೆ 

ದಿನಾಂಕ 16.04.2021 ರಂದು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿಯ ಪೋಷಕರ ಸಭೆ  ನಡೆಯಿತು.   ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.  ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಶಾಲೆಯಲ್ಲಿ ನಡೆಯುವ ಪಾಠ ಪ್ರವಚನಗಳನ್ನು ಗಮನವಿಟ್ಟು ಕೇಳಿ ಉಪನ್ಯಾಸಕರು ವಿವರಿಸಿದ ಪಾಠವನ್ನು ಪುನಃ ಮನೆಯಲ್ಲಿ ಓದಿ ಬರೆದು ಅಭ್ಯಾಸ ನಡೆಸಿದಾಗ ನಿರೀಕ್ಷಿಸಿದ ಅಂಕ ಬರಲು ಸಾಧ್ಯ, ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ ಹಾಗೂ ಪೋಷಕರು ಮಕ್ಕಳ ಓದಿನ ಕಡೆ ಸ್ವಲ್ಪ ಗಮನ ಕೊಟ್ಟು ಶಾಲೆಯೊಂದಿಗೆ ನಿರಂತರ ಸಂಪರ್ಕ ವಿರಿಸಿದಾಗ ಮಾತ್ರ ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ತಿಳಿಸಿದರು.

ಹಿರಿಯ ಉಪನ್ಯಾಸಕಿ ಸುಭದ್ರಾ ಭಟ್ ಮಾತನಾಡಿ ಮಕ್ಕಳಿಗೆ ಓದಿನೊಂದಿಗೆ ಸಂಸ್ಕಾರವನ್ನು ನಮ್ಮ ಶಾಲೆಯ ಉಪನ್ಯಾಸಕರು ನೀಡುತ್ತಿದ್ದಾರೆ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಬೇಕಾದರೆ ಉತ್ತಮ ನಡವಳಿಕೆ ಮತ್ತು ಮಾತು ಮುಖ್ಯ ಎಂದರು.

ಉಪನ್ಯಾಸಕ ಅನಂತ ನಾರಾಯಣ ಪದಕಣ್ಣಾಯ ಮಾತನಾಡಿ ಪೋಷಕರು ಮಕ್ಕಳಿಗೆ ಮನೆಯಲ್ಲಿ ವೇಳಾ ಪಟ್ಟಿಯನ್ನು ಕೊಟ್ಟು  ಪ್ರತಿದಿನ  ಅದನ್ನು ಅನುಷ್ಠಾನ ಗೊಳಿಸಿದ ಬಗ್ಗೆ ಡೈರಿ ಮೂಲಕ  ಉಪನ್ಯಾಸಕರಿಗೆ ತಿಳಿಸಬೇಕು ಎಂದು ತಿಳಿಸಿದರು. ಪೋಷಕರು ತಮ್ಮ ಅಭಿಪ್ರಾಯಗಳನ್ನು  ತಿಳಿಸಿದರು.

ನಂತರ ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಬಗ್ಗೆ ಮತ್ತು ಮುಂಬರುವ ಪರೀಕ್ಷೆಗೆ ತಯಾರಿ ನಡೆಸುವ ಕುರಿತು ಚರ್ಚಿಸಲಾಯಿತು. ಈ ಸಭೆಯಲ್ಲಿ ಪೋಷಕರು,  ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು  ಪಾಲ್ಗೊಂಡಿದ್ದರು.

Highslide for Wordpress Plugin