ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ಪ್ರೇರಣಾ ನೇತೃತ್ವದಲ್ಲಿ ಉಂಡೆಮನೆ ದಿ.ಶಂಭು ಶರ್ಮ ಪ್ರತಿಷ್ಠಾನದ ವತಿಯಿಂದ ಸರಕಾರಿ ಪ್ರೌಢ ಶಾಲೆ ನಾಲ್ಯಪದವಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಮಾರ್ಗದರ್ಶನ ತರಬೇತಿ ಏರ್ಪಡಿಸಲಾಯಿತು.
ಶಿಕ್ಷಣ ಸಂಯೋಜಕ ಯು.ಎಸ್.ವಿಶ್ವೇಶ್ವರ ಭಟ್ ಅವರು ತರಬೇತಿ ನೀಡಿದರು. ಕೋಆರ್ಡಿನೇಟರ್ ಅನಂತನಾರಾಯಣ ಪದಕಣ್ಣಾಯ, ಪ್ರಾಧ್ಯಾಪಿಕೆ ಶ್ರೀಮತಿ ಮಾಧವಿ ಸಹಕರಿಸಿದರು.
ಕಾರ್ಯಗಾರದಲ್ಲಿ ಮಕ್ಕಳಿಗೆ ಪರೀಕ್ಷಾ ಸಿದ್ದತೆ, ಪರೀಕ್ಷೆ ಬರೆಯುವ ರೀತಿ ,ಕಲಿಕೆಯ ವಿಧಾನ ಮತ್ತು 10ರ ನಂತರ ಮುಂದಿರುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಚಟುವಟಿಕೆಗಳ ಮುಲಕ ವಿವರಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತೀ ವಿಜಯಲಕ್ಶ್ಮಿ ಸ್ವಾಗತಿಸಿದರು.