Independence Day 2017-18

ನಮ್ಮ ಹಿರಿಯರು ಕಷ್ಟಪಟ್ಟು ಸಂಪಾದಿಸಿದ ಸ್ವಾತಂತ್ರ್ಯವನ್ನು ಉಳಿಸಿ ಮುಂದುವರಿಸಿಕೊಂಡು ಹೋಗಬೇಕು.
                                                                                                – ಡಾ. ಈಶ್ವರ ಭಟ್ ಪಳ್ಳಾದೆ

ಮಂಗಳೂರಿನ ನಂತೂರಿನಲ್ಲಿರುವ ಶ್ರೀ ಭಾರತೀ ಸಮೂಹ ಸಂಸ್ಥೆಗಳ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣವನ್ನು ಮಾಡಿ ಮಾತನಾಡುತ್ತಾ ಡಾ. ಈಶ್ವರ ಭಟ್ ಪಳ್ಳಾದೆ, ಸಂಚಾಲಕರು ಆರೋಗ್ಯ ಭಾರತಿ ಇವರು ಸ್ವಾರ್ಥವನ್ನು ಬಿಟ್ಟು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಒಗ್ಗಟ್ಟಿನಿಂದ ಬಾಳಬೇಕು ಎಂದರು. ವಿದ್ಯಾರ್ಥಿಗಳು ಇತರ ಚಟುವಟಿಕೆಯೊಂದಿಗೆ ಕಲಿಕೆಯತ್ತ ಮೊದಲು ಗಮನವನ್ನು ಹರಿಸಿ, ವೈಯಕ್ತಿಕ ಬೆಳವಣಿಗೆಗಳನ್ನು ಹೊಂದುತ್ತಾ ರಾಷ್ಟ್ರದ ಅಭಿವೃದ್ಧಿಗೆ ಕಾರಣೀಭೂತರಾಗಬೇಕೆಂದು ಅವರು ಇದೇ ಸಂದರ್ಭದಲ್ಲಿ ಕರೆಕೊಟ್ಟರು. ನಾವು ಕೆಲಸದ ಬಗ್ಗೆ ಗಮನವನ್ನು ಕೊಟ್ಟು ನಮ್ಮ ವೃತ್ತಿಯನ್ನು ಶಿಸ್ತಿನಿಂದ ಮಾಡುತ್ತಾ ಒಳ್ಳೆಯದಾಗುತ್ತಾ ಹೋದ ಹಾಗೆ ನಮ್ಮ ದೇಶವೂ ಒಳ್ಳೆಯದಾಗುತ್ತದೆ. ಆಧುನಿಕ ತಂತ್ರಜ್ಞಾನವನ್ನು ನಾವು ಸದುಪಯೋಗಪಡಿಸಿಕೊಂಡು ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗಬೇಕು ಎಂದು ಈ ಸಂದರ್ಭದಲ್ಲಿ ನುಡಿದರು.

ಈ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಈಶ್ವರ ಪ್ರಸಾದ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿದ್ಯಾ ಭಟ್, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶ್ರೀ ಭಾರತೀ ಪದವಿ ಹಾಗೂ ಪ.ಪೂ. ಕಾಲೇಜು, ಸ್ವಾಮಿ ಸದಾನಂದ ಸರಸ್ವತಿ ಪ್ರೌಢಶಾಲೆ ಹಾಗೂ ಸ್ವಾಮಿ ಸದಾನಂದ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳು ಧ್ವಜಾರೋಹಣ ಸಂದರ್ಭದಲ್ಲಿ ಭಾಗವಹಿಸಿದ್ದರು.

Highslide for Wordpress Plugin