ಮಂಗಳೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ದಿನಾಂಕ ೦5.೦9.2೦17ರಂದು ಶಿಕ್ಷಕರ ದಿನಾಚರಣೆ ನಡೆಯಿತು. ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ತಮ್ಮ ಶಿಕ್ಷಕರನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಉಪನ್ಯಾಸಕಿ ಗಂಗಾರತ್ನ ಶಿಕ್ಷಕರು ಯಾವತ್ತೂ ವಿದ್ಯಾರ್ಥಿಗಳ ಒಳಿತನ್ನೇ ಬಯಸುತ್ತಾರೆ, ಗುರು-ಶಿಷ್ಯರ ಸಂಬಂಧದ ಮಧ್ಯೆ ಇರುವುದು ಅಧಿಕಾರ ಅಲ್ಲ ಆತ್ಮಸಂಸ್ಕಾರ ಎಂದರು. ಕಾರ್ಯಕ್ರಮದ ಆದ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಈಶ್ವರಪ್ರಸಾದ್ ಅವರು, ಗುರು ಎಂದರೆ ಅಂಧಕಾರವನ್ನು ನಿವಾರಿಸುವವನು ಎಂದು ಹೇಳಿ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಕು. ಸುಶ್ಮಿತಾ ಸ್ವಾಗತಿಸಿ, ಕು. ಸಂಧ್ಯಾ ವಂದಿಸಿದರು. ವೆಂಕಟೇಶ್ ಕಾರ್ಯಕ್ರಮ ನಿರೂಪಣೆಗೈದರು. ನಂತರ ಪ್ರತಿಭಾ ಪ್ರದರ್ಶನದ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.