ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಹೊರಸಂಚಾರ ಮತ್ತು ಬೆಂಕಿಯಿಲ್ಲದೇ ಅಡುಗೆ ತಯಾರಿಸುವ ಕಾರ್ಯಕ್ರಮ

ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಹೊರಸಂಚಾರ ಮತ್ತು ಬೆಂಕಿಯಿಲ್ಲದೇ ಅಡುಗೆ ತಯಾರಿಸುವ ಕಾರ್ಯಕ್ರಮ

ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8, 9ನೇ ತರಗತಿಯ ಮತ್ತು ಸ್ವಾಮಿ ಸದಾನಂದ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ 5, 6, 7 ತರಗತಿಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಹೊರಸಂಚಾರ ಮತ್ತು ಬೆಂಕಿಯಿಲ್ಲದೇ ಅಡುಗೆ ತಯಾರಿಸುವ ಕಾರ್ಯಕ್ರಮ ಎ.11ರಂದು ಆಯೋಜಿಸಲಾಗಿತ್ತು.

 

ಸಂಸ್ಥೆಯ ವಠಾರದಿಂದ ಬೆಳಗ್ಗೆ ನಡೆದುಕೊಂಡು ಹೊರಟ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕದ್ರಿ ಪಾರ್ಕಿನಲ್ಲಿ ಬೆಂಕಿರಹಿತ ಅಡುಗೆ ತಯಾರಿಸಿ, ರುಚಿ ರುಚಿಯಾದ ಆಹಾರ ಸ್ವೀಕರಿಸಿದರು. ಆಕಾಶವಾಣಿ, ವಾರ್ ಮೆಮೋರಿಯಲ್ ವೀಕ್ಷಿಸಿದರು. ಮಣ್ಣಿನ ಪಾತ್ರೆ ಮಾರಾಟ ಮಾಡುವವರ ಬಳಿಗೆ, ಬೆತ್ತದ ಕುರ್ಚಿ ಮಾಡುವವರ ಬಳಿಗೆ, ಪ್ಲಾಸ್ಟಿಕ್ ನೂಲುಗಳ ಮೂಲಕ ಕುರ್ಚಿ ತಯಾರಿಸುವವರ ಬಳಿಗೆ ತೆರಳಿ ಅನುಭವ ಪಡೆದುಕೊಂಡರು.

 

32 ಮಂದಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಾದ ಪ್ರತಿಮ್ ಕುಮಾರ್ ಎಸ್. ಮತ್ತು ಜಯಪ್ರಕಾಶ್ ಮಾರ್ಗದರ್ಶನ ಮಾಡಿದರು.

Highslide for Wordpress Plugin