ಸಂಸ್ಥೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಪ್ಲಾಸ್ಟಿಕ್‌ ಮುಕ್ತ ಯೋಜನೆಯ ಅಡಿಯಲ್ಲಿ ದಿನಾಂಕ 13.02.2021 ರಂದು ನಮ್ಮಸಂಸ್ಥೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೀವನ್‌ ದಾಸ್‌ ಎ ಉದ್ಘಾಟಿಸಿ, ನಮ್ಮ ಮನೆ ಮತ್ತು ಪರಿಸರವನ್ನು ಸ್ವಚ್ಛವಾಗಿಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ಇದು ನಮ್ಮ ಆದ್ಯ ಕರ್ತವ್ಯವೂ ಹೌದು ಎಂದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ರೋವರ್ಸ್‌ ಮತ್ತು ರೇಂಜರ್ಸ್‌ ನಾಯಕರಾದ ಶ್ರೀ. ಪ್ರತಿಮ್‌ ಕುಮಾರ್‌ ಮಾತ್ತು ರೇಂಜರ್ಸ್‌ ನಾಯಕಿಯಾಗಿರುವ ಕುಮಾರಿ ಸಾಧನಾ ಭಾಗವಹಿಸಿದ್ದರು. ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿವೇಕ್‌ ಭಟ್ ದೇವ ಸ್ವಾಗತಿಸಿ, ಕಾರ್ಯದರ್ಶಿ ಸಂಜನಾ ವಂದಿಸಿದರು. ನಂತರ  ಪದವಿ ಲಾಲೇಜಿನ ಎನ್‌ ಎಸ್‌ ಎಸ್ ವಿದ್ಯಾರ್ಥಿಗಳೊಂದಿಗೆ ಸಂಸ್ಥೆಯ ಸ್ಕೌಟ್ಸ್‌, ರೋವರ್ಸ್‌, ರೇಂಜರ್ಸ್‌ ಹಾಗೂ‌ ಎಲ್ಲಾ ವಿದ್ಯಾರ್ಥಿಗಳು ಸೇರಿ ಸಂಸ್ಥೆಯ ಆವರಣವನ್ನು ಸ್ವಚ್ಛಗೊಳಿಸಿದರು.

Highslide for Wordpress Plugin