ಶ್ರೀ ಭಾರತೀ ಸಮೂಹ ಸಂಸ್ಥೆಯ ವಿದ್ಯಾರ್ಥಿ ಸಂಘ ಉದ್ಘಾಟನೆ

ಅಸಾಧ್ಯವಾದುದು ಯಾವುದೂ ಇಲ್ಲ. : ಶ್ಯಾಮ ಭಟ್

ನಂತೂರು, ಜು.12 : ನಮ್ಮ ಮಾತುಗಳು ವ್ಯಕ್ತಿತ್ವದ ಪ್ರತಿಬಿಂಬ. ಸಮಾಜ ಮತ್ತು ವಿದ್ಯಾಲಯದಲ್ಲಿ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಸಂಘಟನೆಗೆ ಪೂರಕವಾದ ಯೋಜನೆ ರೂಪಿಸಿಕೊಳ್ಳಬೇಕು. ಸಂಘದ ಮೂಲಕ ಪ್ರತಿಯೊಬ್ಬರ ಪ್ರತಿಭಾ ದರ್ಶನವಾಗುತ್ತದೆ. ಅಸಾಧ್ಯವಾದುದು ಯಾವುದೂ ಇಲ್ಲ. ಚಿಕ್ಕ ಪುಟ್ಟ ವಿಷಯಗಳಲ್ಲಿ ಸಾರ್ಥಕ ಮನೋಭಾವ ಬರುತ್ತದೆ. ಇಂತಹ ಸಂಸ್ಕಾರ ಸಂಸ್ಕೃತಿಯುಕ್ತ ಶಾಲೆಗೆ ಬರುವ ಮಕ್ಕಳು ಅದೃಷ್ಟವಂತರು ಎಂದು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಪ್ರಾಂಶುಪಾಲ ಶ್ಯಾಮ ಭಟ್ ಅವರು ಹೇಳಿದರು.

ಅವರು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳ ವಿವಿಧ ಸಂಘಗಳನ್ನು ಉದ್ಘಾಟಿಸಿದರು.

ಸಿಂಚನಲಕ್ಷ್ಮೀ ಅವರು ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿ, ಶ್ರಮ, ನಿಷ್ಠೆ, ಶಿಸ್ತು ಜೀವನದ ಯಶಸ್ಸಿಗೆ ಕಾರಣವಾಗುತ್ತದೆ. ಆತ್ಮವಿಶ್ವಾಸ, ಛಲ ಬೇಕು. ಯಾವುದೇ ಸಾಧನೆ ಮಾಡಬಹುದು ಎಂದು ಹೇಳಿದರು.

ನಂತೂರು ಶ್ರೀ ಭಾರತೀ ಕಾಲೇಜು ಪ್ರಾಂಶುಪಾಲ ಪ್ರೊ.ಜೀವನ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಕಾರ್ತಿಕ್ ಕೃಷ್ಣ, ವಿದ್ಯಾರ್ಥಿ ನಾಯಕ ಕಾರ್ತಿಕ್ ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಗೌತಮ್, ಎಸ್ ಪಿಎಲ್ ಜಾನ್ವಿ, ಸಾನ್ವೀ, ಅಮೃತಲಕ್ಷ್ಮೀ, ಸಾನ್ವೀ, ದನಿಶಾ, ಋಷಿಕಾ ಸಪಲ್ಯ, ಅಚಿಂತ, ನಾಗರಾಜ್, ಅಭಿನಂದನ್, ಚಿರಾಗ್, ಆಕಾಶ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಮುರಳಿಕೃಷ್ಣ ಅವರನ್ನು ಸಮ್ಮಾನಿಸಲಾಯಿತು. ಪರಿಸರ ದಿನಾಚರಣೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ ಅವರು ಪ್ರಸ್ತಾಪಿಸಿದರು. ಉಪನ್ಯಾಸಕಿ ಮಲ್ಲಿಕಾ ಸಂತೋಷ್ ಸ್ವಾಗತಿಸಿ, ಉಪನ್ಯಾಸಕಿ ಗಾಯತ್ರಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರತಿಮ್ ಕುಮಾರ್ ಪ್ರಮಾಣವಚನ ಬೋಧಿಸಿದರು. ಉಪನ್ಯಾಸಕಿ ರಶ್ಮಿ, ಗೌತಮಿ ಪರಿಚಯಿಸಿದರು. ಶಿಕ್ಷಕಿ ಗಾಯತ್ರಿ ಎಚ್.ಎಸ್. ವಿಜೇತರ ಪಟ್ಟಿ ವಾಚಿಸಿದರು. ಶಿಕ್ಷಕಿ ಸೌಮ್ಯಾ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin