ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಹಿರಿಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ  ಗಣೇಶೋತ್ಸವ ಸ್ಪರ್ಧೆಗಳು

ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಹಿರಿಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ  ಗಣೇಶೋತ್ಸವ ಸ್ಪರ್ಧೆಗಳು

 

ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಆತ್ಮಸಂತೋಷಕ್ಕಾಗಿ ಭಾಗವಹಿಸಬೇಕು ಹೊರತು ಬಹುಮಾನಕ್ಕಾಗಿ ಅಲ್ಲ.ಸ್ಪರ್ಧೆಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ರಾಮಕೃಷ್ಣ ಮಠದ ಗುರುಗಳಾದ ಶ್ರೀಶ್ರೀ ಧರ್ಮವೃತಾನಂದ ಸ್ವಾಮೀಜಿ  ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು  ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ  ಅಂತರ್ ಶಾಲಾ  ಗಣೇಶೋತ್ಸವ ಸ್ಪರ್ಧೆಗಳ ಉದ್ಘಾಟನೆಯನ್ನು ನೆರವೇರಿಸಿ ಹಿತನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಕಾರ್ಯಾಲಯ ಕಾರ್ಯದರ್ಶಿ ಶ್ರೀ ಎಮ್.ಟಿ.ಭಟ್ ಮಾತನಾಡಿ ವಿದ್ಯಾರ್ಥಿಗಳೆಲ್ಲರಿಗೂ ಅಚ್ಚುಮೆಚ್ಚಾದ ಗಣೇಶನ ಉತ್ಸವದಿಂದ ವಿದ್ಯಾರ್ಥಿಗಳು ಕಲಿಯಲು ಸಾಕಷ್ಟಿದೆ ಎಂದು ಹೇಳಿದರು.

ಶ್ರೀ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲರಾದ  ಡಾ ಈಶ್ವರಪ್ರಸಾದ್ ಉಪಸ್ಥಿತರಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ವಿದ್ಯಾಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಶಾಲೆಯಲ್ಲಿ ನಡೆಯುವ ಸ್ಪರ್ಧೆಗಳ ವಿವರ ನೀಡಿದರು.ಪ್ರಾದ್ಯಾಪಿಕೆ ಕು ಪ್ರತಿಮಾ ಸ್ವಾಗತಿಸಿ ,ಶ್ರೀಮತಿ ಸುಭದ್ರಾಭಟ್ ವಂದಿಸಿದರು.ಶ್ರೀಮತಿ ದಿವ್ಯಲತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಸ್ವಾಮಿ ಸದಾನಂದ ಸರಸ್ವತೀ  ವಿದ್ಯಾಲಯದ ಮುಖ್ಯೋಪಾದ್ಯಾಯರಾದ ಶ್ರೀ ಗುರುರಾಜ್ ಭಟ್ ಉಪಸ್ಥಿತರಿದ್ದು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

 

ಪ್ರಾಥಮಿಕ ವಿಭಾಗ ಭಜನೆ ಪ್ರಥಮ

ಭೂಮಿಕ ಮತ್ತು ತಂಡ-   ಚಿನ್ಮಯ ಪ್ರಾಥಮಿಕ ಶಾಲೆ

ಪ್ರೌಢಶಾಲಾ ವಿಭಾಗ ಭಜನೆ ಪ್ರಥಮ

ಅಕ್ಷಿತ್ ಮತ್ತು ತಂಡ -ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಲ್ಲಕಾಡು

 

ಪ್ರಾಥಮಿಕ ವಿಭಾಗ ಚಿತ್ರಕಲೆ ಪ್ರಥಮ

ಸ್ವಾತಿ ಕೆ -ನಾಲ್ಯಪದವು ಪ್ರಾಥಮಿಕ ಶಾಲೆ

ಪ್ರೌಢಶಾಲಾ ವಿಭಾಗ ಚಿತ್ರಕಲೆ ಪ್ರಥಮ

ಕಾವ್ಯ -ಚಿನ್ಮಯ ಪ್ರೌಡಶಾಲೆ

 

ಪ್ರಾಥಮಿಕ ವಿಭಾಗ  ಮಣ್ಣಿನ ಮಾದರಿ ಪ್ರಥಮ

ಸೃಜನ್- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಲ್ಲಕಾಡು

ಪ್ರೌಢಶಾಲಾ ವಿಭಾಗ ಮಣ್ಣಿನ ಮಾದರಿ ಪ್ರಥಮ

ಅಭಿಷೇಕ್ -ಸ್ವಾಮಿ ಸದಾನಂದ ಸರಸ್ವತಿ ಆಂಗ್ಲಮಾದ್ಯಮ ಶಾಲೆ ನಂತೂರು

 

Highslide for Wordpress Plugin