ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ರಕ್ಷಾಬಂಧನ ಮತ್ತು ಓಣಮ್ ಆಚರಣೆ ನಡೆಯಿತು.
ರಕ್ಷಾಬಂಧನ ಕಾರ್ಯಕ್ರಮದಲ್ಲಿ ಕದ್ರಿ ನಗರ ಶಾರೀರಿಕ ಪ್ರಮುಖ್ ಪವನ್‌ಸಾಗರ್ ಅವರು ಬೌದ್ಧಿಕ್ ನೀಡಿ ರಕ್ಷೆ ಕಟ್ಟುವುದರಿಂದ ಸಹೋದರತೆಯ ಬಾಂಧವ್ಯ ಬೆಳೆಯುವುದು ಮಾತ್ರವಲ್ಲ ನಮ್ಮೊಳಗೆ ದೇಶಪ್ರೇಮವೂ ಉಜ್ವಲವಾಗುತ್ತದೆ ಎಂದರು. ನಂತರ ಎಲ್ಲ ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿಕೊಂಡರು.
ಕದ್ರಿ ನಗರ ಕಾರ್ಯವಾಹ ಸುಭಾಷ್, ಕದ್ರಿ ಉಪನಗರ ಕಾರ್ಯವಾಹ ಆಕಾಶ್ ಮತ್ತು ವಿದ್ಯಾರ್ಥಿಗಳಾದ ಆಕಾಶ್,ಯಶ್ಮಿತ್ ಜಿ.ಎಲ್ ಸಹಕರಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಪೂಕಳಂ ಹಾಕಿ ಓಣಮ್ ನೃತ್ಯವನ್ನು ಪ್ರದರ್ಶಿಸಿದರು.ನಂತರ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.
ಉಪನ್ಯಾಸಕಿ ರಶ್ಮಿ ಸ್ವಾಗತಿಸಿ ದೈಹಿಕ ಶಿಕ್ಷಣ ಶಿಕ್ಷಕ ಪ್ರತಿಮ್ ಕುಮಾರ್ ವಂದಿಸಿದರು.