ಶ್ರೀ ಭಾರತೀ ಸಮೂಹ ಸಂಸ್ಠೆಗಳ ಪ್ರಥಮ ವರ್ಷದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ 7 ದಿವಸದ ರಾಜಾ ಕಾಲದ ವಿಶೇಷ ಸ್ಪೋಕನ್ ಇಂಗ್ಲೀಷ್ ಮತ್ತು ಪರ್ಸನಾಲಿಟಿ ಡೆವೆಲಪ್ ಮೆಂಟ್ ಶಿಬಿರ ನಡೆಯಿತು.
ಮೊದಲ ದಿನದ ಶಿಬಿರದಲ್ಲಿ ಪ್ರಾಧ್ಯಾಪಕ ಶ್ರೀ ರವಿಶಂಕರ ಭಟ್ ವಿದ್ಯಾರ್ಥಿಗಳಿಗೆ ಕ್ರಿಯೆಟಿವಿಟಿ ಮತ್ತು ಪ್ರಾಬ್ಲಮ್ ಸೊಲೊವಿಂಗ್ ವಿಷಯದ ಬಗ್ಗೆ ಒಂದು ದಿನದ ಕಾರ್ಯಗಾರ ನಡೆಸಿದರು.ಶ್ರೀ ರವಿಶಂಕರ್ ಭಟ್ ಅವರು ಅಂಗಡಿ ಮೊಗರು ಶಾಲೆಯಲ್ಲಿ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದು ಕೇರಳ ಪಠ್ಯ ಪುಸ್ತಕ ಸಮಿತಿ ಸದಸ್ಯ ಮತ್ತು ರಾಜ್ಯ ಶಿಕ್ಷಕರ ಇಂಗ್ಲೀಷ್ ತರಬೇತುದಾರ, ಸ್ಟೇಟ್ ಲೆವೆಲ್ ಸ್ಕಿಲ್ ಡೆವೆಲಪ್ ಮೆಂಟ್ , ತರಬೇತುದಾರರಾಗಿರುತ್ತಾರೆ.
ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ರಜಾ ಕಾಲದ ವಿಶೇಷ ಶಿಬಿರದ 2 ನೇ ದಿನ ಸರ್ಕಾರಿ ಪ್ರೌಢಶಾಲೆ ಬೈಕಂಪಾಡಿ ಇದರ ಕನ್ನಡ ಪ್ರಾಧ್ಯಾಪಕ ಅನಂತ ಪದ್ಮನಾಭ ಭಟ್ ಇವರಿಂದ ಸಾಹಿತ್ಯ ಕಮ್ಮಟ ನಡೆಯಿತು.
ವಿದ್ಯಾರ್ಥಿಗಳು ಸ್ವಯಂ ಕವಿತಾ ರಚನೆ,ಕಥೆ ರಚನೆ ಮಾಡುವ ಮೂಲಕ ಉತ್ಸಾಹದಿಂದ ಪಾಲ್ಗೊಂಡರು.
ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ರಜಾ ಕಾಲದ ವಿಶೇಷ ಶಿಬಿರದ 3 ನೇ ದಿನ ಬುಧವಾರ ಶ್ರೀ ನವೀನ್ ರಾವ್ ಉಪನ್ಯಾಸಕ ವಿದ್ಯಾ ರತ್ನ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಇವರಿಂದ ಕಮ್ಯುನಿಕೇಷನ್ ಇನ್ ಇಂಗ್ಲೀಷ್ ಬಗ್ಗೆ ತರಬೇತಿ.
ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ರಜಾ ದಿನದ ವಿಶೇಷ ಶಿಬಿರದ 4 ನೇ ದಿನ ವಿದ್ಯಾ ರತ್ನ ಪ್ರೌಢ ಶಾಲೆಯ ಪ್ರಾಧ್ಯಾಪಕ ಶ್ರೀ ನವೀನ್ ರಾವ್ ಅವರಿಂದ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಮತ್ತು ಗ್ರಾಮರ್ ಬಗ್ಗೆ ತರಬೇತಿ.
ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ರಜಾ ಕಾಲದ ವಿಶೇಷ ಶಿಬಿರದ 5ನೇ ದಿನ ಇಂದು ಶ್ರೀ ಶ್ರೀಕೃಷ್ಣ ಭಟ್ ಇವರಿಂದ ವಿದ್ಯಾರ್ಥಿಗಳಿಗೆ ಸಾಪ್ಟ್ ವೇರ್ ಸ್ಕಿಲ್ ಮತ್ತು ಕಮೂನಿಕೇಷನ್ಸ್ ಸ್ಕಿಲ್ ಬಗ್ಗೆ ತರಬೇತಿ.
ಶ್ರೀ ಶ್ರೀಕೃಷ್ಣ ಭಟ್ ಇವರು ಗ್ಲೋ ಟಚ್ ಟೆಕ್ನಾಲಜಿ ಪ್ರೇವೇಟ್ ಲಿಮಿಟೆಡ್ ನಲ್ಲಿಸಾಪ್ಟ್ ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ರಜಾ ಕಾಲದ ವಿಶೇಷ ಶಿಬಿರದ 6ನೇ ದಿವಸ ಶ್ರೀ ವಿಶ್ವೇಶ್ವರ ಭಟ್ ಉಂಡೆ ಮನೆ ಇವರಿಂದ ಪಬ್ಲಿಕ್ ಸ್ಪೀಕಿಂಗ್ ಬಗ್ಗೆ ವಿಶೇಷ ತರಗತಿ.
ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ರಜಾ ಕಾಲದ ವಿಶೇಷ ಶಿಬಿರದ 7 ನೇ ದಿವಸ ಕುಮಾರಿ ರಶ್ಮಿ ಉಪನ್ಯಾಸಕರು ವಿವೇಕಾನಂದ ಪದವಿ ಪೂರ್ವ ಕಾಲೇಜು ಇವರಿಂದ ಕಮ್ಯುನಿಕೇಷನ್ ಇನ್ ಇಂಗ್ಲೀಷ್ ಮತ್ತು ಲೆಟರ್ ಡ್ರಾಪ್ಟ್ ಬಗ್ಗೆ ಉಪನ್ಯಾಸ.
ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ರಜಾ ಕಾಲದ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.ಸಭಾಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಅಧಿಕಾರಿ ಶಂಕರ ಭಟ್ ವಹಿಸಿದ್ದರು.
ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಇಲ್ಲಿ ಕಲಿತದನ್ನು ಅನುಷ್ಟಾನಗೊಳಿಸಿದಾಗ ಯಶಸ್ಸು ಸಾಧ್ಯ ಎಂದು ಹೇಳಿದರು.