ಶ್ರೀ ಭಾರತೀ ಕಾಲೇಜು, ನಂತೂರು, ರಕ್ತದಾನ ಶಿಬಿರ ಜರುಗಿತು

ರಕ್ತದಾನದಿಂದ ಭಾತೃತ್ವ ವೃದ್ಧಿಸುತ್ತದೆ.
ಡಾ|| ರಾಜೇಂದ್ರ ಪ್ರಸಾದ್‌.

ರಕ್ತದಾನ ಶ್ರೇಷ್ಠದಾನ. ರಕ್ತಕ್ಕೆ ಪರ್ಯಾಯವಾದ ವಸ್ತು ಇನ್ನೊಂದಿಲ್ಲ. ರಕ್ತದಾನದಿಂದಲೇ ರಕ್ತದ ಕೊರತೆಯನ್ನು ನೀಗಿಸಲು ಸಾದ್ಯವಾಗುತ್ತದೆ. ಈ ಕಾರಣದಿಂದ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನ ಮಾಡಬೇಕು. ರಕ್ತದಾನದಿಂದ ವೈದ್ಯರ ಕೆಲಸ ಸುಲಭವಾಗುತ್ತದೆ. ರಕ್ತದಾನದಿಂದ ಸಹೋದರತ್ವ ವೃದ್ದಿಸಿ ಭಾತೃತ್ವ ವೃದ್ದಿಸುತ್ತದೆ. ಕೋವಿಡ್‌ ಸಂಕಷ್ಟದ ದಿನಗಳಲ್ಲಿ ರಕ್ತದ ಕೃತಕ ಅಭಾವ ಉಂಟಾಗಿದೆ. ಎಲ್ಲರೂ ರಕ್ತದಾನ ಮಾಡುವುದರ ಮುಖಾಂತರ ಈ ಕೊರತೆಯನ್ನು ನೀಗಿಸಬಹುದು ಎಂದು ಮಂಗಳೂರು ಹವ್ಯಕ ಮಹಾಸಭಾದ ಉಪಾಧ್ಯಕ್ಷರಾದ ಡಾ|| ರಾಜೇಂದ್ರ ಪ್ರಸಾದ್‌ ಅವರು ರಕ್ತದಾನ ಶಿಬಿರ ಉದ್ಘಾಟಿಸಿ ನುಡಿದರು. ಶ್ರೀ ಭಾರತೀ ಸಮೂಹ ಸಂಸ್ಥೆಗಳು, ಚೂಂತಾರು ಸರೋಜಿನಿ ಭಟ್‌ ಪ್ರತಿಷ್ಠಾನ ಮತ್ತು ಮಂಗಳೂರು ಹವ್ಯಕ ಸಭಾ ಇವರ ಜಂಟಿ ಆಶ್ರಯದಲ್ಲಿ, ತೇಜಸ್ವಿನಿ ಆಸ್ಪತ್ರೆಯ ಸಹಯೋಗದೊಂದಿಗೆ , ಶ್ರೀ ಭಾರತೀ ಕಾಲೇಜು, ನಂತೂರು ಇಲ್ಲಿ ದಿನಾಂಕ 05.02.2021, ಶುಕ್ರವಾರದಂದು ರಕ್ತದಾನ ಶಿಬಿರ ಜರುಗಿತು. ಚೂಂತಾರು ಸರೋಜಿನಿ ಭಟ್‌ ಪ್ರತಿಷ್ಠಾನದ ಕಾರ್ಯದರ್ಶಿ ಡಾ|| ಮುರಲೀ ಮೋಹನ್‌ ಚೂಂತಾರು ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಭಾರತೀ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೀವನ್‌ ದಾಸ್‌ ರಕ್ತದಾನದ ಮಹತ್ವವನ್ನು ವಿವರಿಸಿದರು. ತೇಜಸ್ವಿನಿ ಆಸ್ಪತ್ರೆಯ ವೈದ್ಯರಾದ ಡಾ|| ಶ್ರವಣ್‌, ಹವ್ಯಕ ಸಭಾ ಮಂಗಳೂರು ಇದರ ಸದಸ್ಯರಾದ ಅನಿತಾ ಬೋಳಂತಕೋಡಿ, ಗೀತಾದೇವಿ ಚೂಂತಾರು, ಹವ್ಯಕ ಸಭಾ ಮಂಗಳೂರು ಇದರ ಮಾಜಿ ಅಧ್ಯಕ್ಷರಾದ ಶ್ರೀ. ಶ್ರೀಕೃಷ್ಣನೀರಮೂಲೆ, ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕೋಶಾಧಿಕಾರಿ ಶ್ರೀ ಉದಯಶಂಕರ ನೀರ್ಪಾಜೆ , ಶ್ರೀ ಭಾರತೀ ಕಾಲೇಜಿನ ಉಪಪ್ರಾಂಶುಪಾಲೆ ಗಂಗಾರತ್ನ ಉಪಸ್ಥಿತರಿದ್ದು, ತೇಜಸ್ವಿನಿ ಆಸ್ಪತ್ರೆಯ ವ್ಯೆದ್ಯರು ಈ ಶಿಬಿರ ನಡೆಸಲು ಸಹಕಾರ ನೀಡಿದರು. ಸುಮಾರು 20ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.

Highslide for Wordpress Plugin