ಶ್ರೀ ಭಾರತೀ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಮಂಗಳೂರು ನಂತೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ದಿನಾಂಕ 9-3-22 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ JCI ಶ್ರೇಷ್ಠ, ಮಂಗಳೂರು ಇವರ ವತಿಯಿಂದ, ವಿದ್ಯಾರ್ಥಿನಿಯರಿಗೆ ಮಹಿಳಾ ಸ್ವಾಸ್ಥ್ಯ ಮತ್ತು ಸ್ವಚ್ಛತೆಯ ಕುರಿತು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ  ಮಹಿಳಾ ಸಬಲೀಕರಣ,ಶಿಕ್ಷಣ ಮತ್ತು ಸಮಾನತೆಗಳ ಬಗ್ಗೆ ಮಾತನಾಡಿದರು.

ನಂತರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕುಮಾರಿ ವರ್ಷಾ ಪಿ. ಶೆಟ್ಟಿ ಅವರು ಮಹಿಳಾ ಸ್ವಾಸ್ಥ್ಯ ಮತ್ತು ಸ್ವಚ್ಚತೆಯ ಬಗ್ಗೆ ಜಾಗೃತಿ ಹಾಗೂ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ JC HGF ಪೂಜಾ ರಾವ್ ಅವರು  ಸ್ವಾಗತಿಸಿ, JCHGF ವಿಶ್ವಜ್ಞ ಆಚಾರ್ಯ ವಂದಿಸಿದರು.

ಈ ಸಂದರ್ಭದಲ್ಲಿ JCI ಶ್ರೇಷ್ಠ ಮಂಗಳೂರು ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರವಿಚಂದ್ರ ಪಾಠಾಳಿ ಹಾಗೂ JCI ಲತಾ ಅವರು ಉಪಸ್ಥಿತರಿದ್ದರು.

Highslide for Wordpress Plugin