ಶ್ರೀ ಭಾರತೀ ಆಂಗ್ಲಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ಪೋಷಕರ ಸಭೆ

ದಿ. 26.11.2022ರಂದು ಶ್ರೀ ಭಾರತೀ ಆಂಗ್ಲಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ಪೋಷಕರ ಸಭೆಯು ನಡೆಯಿತು.

ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸುರೇಶ್ ಶೆಣೈ ಮಾತನಾಡಿ, ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳಲ್ಲಿ ನಾವು ಒಳ್ಳೆಯ ಗುಣನಡತೆಗಳನ್ನು ಕಾಣಬಹುದು. ಕನಿಷ್ಟ ಅಂಕಗಳನ್ನು ಪಡೆದು ಈ ಸಂಸ್ಥೆಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಇಲ್ಲಿನ ಶಿಕ್ಷಕರ ಮಾರ್ಗದರ್ಶನದಿಂದಾಗಿ ಅಧಿಕ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿರುತ್ತಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳ ಪಲಿತಾಂಶವನ್ನು ಗಮನಿಸಿದ ಇತರ ವಿದ್ಯಾಸಂಸ್ಥೆಗಳು ಪ್ರಶಂಶಿಸಿರುವುದು ಬಹಳ ಹೆಮ್ಮೆಯ ವಿಚಾರ ಅಲ್ಲದೆ ಈ ಸಂಸ್ಥೆಯ ಮಣ್ಣಿನ ಪಾವಿತ್ರ್ಯತೆ ಮತ್ತು ಶ್ರೀ ಗುರುಗಳ ಆಶೀರ್ವಾದವೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ದಾರಿದೀಪವಾಗಿದೆ ಎಂದರು.

ಸಂಸ್ಥೆಯ ಸೇವಾ ಸಮಿತಿಯ ಕೋಶಾಧಿಕಾರಿ ಶ್ರೀ ಉದಯಶಂಕರ್ ನೀರ್ಪಾಜೆ ಮಾತನಾಡಿ, ನಮ್ಮ ಸಂಸ್ಥೆಯಿಂದ ದೊರಕುವ ಶಿಕ್ಷಣವು ಅತ್ಯುತ್ತಮವಾಗಿದೆ, ವಿದ್ಯಾರ್ಥಿಗಳ ಪ್ರಗತಿಯ ಕುರಿತಾದ ಪ್ರಶಂಸೆಯು ಸಂಸ್ಥೆಯ ಎಲ್ಲಾ ಶಿಕ್ಷಕರಿಗೆ ಸಲ್ಲುತ್ತದೆ ಎಂದರು. ಪೋಷಕರು ಶಾಲಾ ಪ್ರಾರಂಭದ ದಿನದಿಂದಲೇ ತಮ್ಮ ಮಕ್ಕಳ ಓದಿನ ಕಡೆಗೆ ಗಮನ ಹರಿಸಬೇಕು ಮತ್ತು ಶಿಕ್ಷಕರೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿರಬೇಕು ಎಂದರು.ವಿದ್ಯಾರ್ಥಿಗಳ ಪ್ರಗತಿಗಾಗಿ ಶಿಕ್ಷಕರು ಕೈಗೊಂಡಿರುವ ಶಿಸ್ತುಕ್ರಮಗಳು, ಕಲಿಕಾವಿಧಾನಗಳು ಮತ್ತು ಅವರ ಮುಂದಿನ ಜೀವನಕ್ಕೆ ಸಹಕಾರಿಯಾಗುವಂತೆ ಕೌಶಲ್ಯಾಭಿವೃದ್ದಿ ವಿಷಯಗಳನ್ನು ಬೋಧಿಸುತ್ತಿರುವ ಬಗ್ಗೆ ತಿಳಿಸಿದರು. ಸಂಸ್ಥೆಯ ಸೇವಾಸಮಿತಿಯು ವಿದ್ಯಾರ್ಥಿಗಳ ಪ್ರಗತಿಗಾಗಿ ಚಟುವಟಿಕೆಗಳನ್ನು ಕೈಗೊಳ್ಳಲು ಸದಾ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದರು.

ಪ್ರಾಂಶುಪಾಲರಾದ ಗಂಗಾರತ್ನ ಅವರು ಮಾತನಾಡಿ ಪೋಷಕರು ವಿದ್ಯಾರ್ಥಿಗಳ ಪ್ರಗತಿಯ ಕಡೆಗೆ ತಮ್ಮ ಗಮನ ಹರಿಸಬೇಕು ಎಂದರು.

ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುಸುತ್ತಾ ಸಂಸ್ಥೆಯ ವಾತಾವರಣ ವಿದ್ಯಾರ್ಥಿಗಳ ವಿದ್ಯಭ್ಯಾಸಕ್ಕೆ ಪೂರಕವಾಗಿದೆ ಅಲ್ಲದೆ ಇಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾಥಿಗಳಲ್ಲಿ ನಾವು ಉತ್ತಮ ಗುಣನಡತೆಗಳನ್ನು ಕಾಣಬಹುದು ಎಂದರು.

ಪೋಷಕರು ತಮ್ಮ‌ ಅನಿಸಿಕೆಗಳನ್ನು ತಿಳಿಸುತ್ತಾ ಈ ಸಂಸ್ಥೆಯಿಂದ ದೊರಕುತ್ತಿರುವ ಉತ್ತಮ ವಿದ್ಯಾಭ್ಯಾಸದ ಕುರಿತು ಯಾವುದೇ ಕೊರತೆ ಕಂಡು ಬರುತ್ತಿಲ್ಲ ಎಂದರು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಇನ್ನಷ್ಟು ಉತ್ತಮಗೊಳಿಸಲು ವಿಶೇಷ ತರಗತಿಗಳನ್ನು ನಡೆಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ಣಯಗಳು:

ಪೋಷಕರು ತಮ್ಮ ಮಕ್ಕಳನ್ನು ಪಿ.ಯು.ಸಿ ವಿದ್ಯಾಭ್ಯಾಸಕ್ಕೆ ಇದೇ ಸಂಸ್ಥೆಗೆ ದಾಖಲಾತಿಗೊಳಿಸುವುದು.
ವಿದ್ಯಾರ್ಥಿಗಳ ಗುಣ ನಡತೆಗಳನ್ನು ಸರಿಪಡಿಸಲು ಯಾವುದೇ ಶಿಸ್ತು ಕ್ರಮಗಳನ್ನು ಕೈಗೊಳ್ಳಬಹುದು, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಶಾಲಾ ಪ್ರವಾಸದ ಬದಲಾಗಿ “ಸ್ಕೌಟ್ಸ್ – ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ” ಗೆ ಕರೆದುಕೊಂಡು ಹೋಗುವುದು ಎಂಬಿತ್ಯಾದಿ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಾಲಾಯಿತು.ಈ ಸಭೆಯಲ್ಲಿ ಎಲ್ಲಾ ಶಿಕ್ಷಕರು ಹಾಜರಿದ್ದರು.

ಉಪಪ್ರಾಂಶುಪಾಲರಾದ ಶ್ರೀಮತಿ ಗಾಯತ್ರಿ ಶೆಣೈ ಸ್ವಾಗತಿಸಿ ಸಂಸ್ಥೆಯ ಸಂಯೋಜಕಿ ಶ್ರೀಮತಿ ಜಯಂತಿ ವಂದಿಸಿದರು.

Highslide for Wordpress Plugin