ಶ್ರೀ ಭಾರತೀ ಆಂಗ್ಲಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ಪೋಷಕರ ಸಭೆ

ದಿನಾಂಕ 03.12.2022ರಂದು ಶ್ರೀ ಭಾರತೀ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ 9ನೇ ತರಗತಿಯ ಪೋಷಕರ ಸಭೆ ನಡೆಯಿತು.

ಮುಖ್ಯೋಪಾಧ್ಯಾಯರಾದ ಗಂಗಾರತ್ನ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗಿ ವಿದ್ಯಾರ್ಥಿಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟುವ ದೃಷ್ಟಿಯಿಂದ ಪೋಷಕರು ತಮ್ಮ ಮಕ್ಕಳ ಮೊಬೈಲ್ ಬಳಕೆಯನ್ನು ಹಿಡಿತದಲ್ಲಿರಿಸಲು ತಿಳಿಸಿದರು. ಪೋಷಕರು ತಮ್ಮಮಕ್ಕಳ ಪ್ರಗತಿಗಾಗಿ ಶಿಕ್ಷಕರನ್ನು ನಿರಂತರವಾಗಿ ಸಂಪರ್ಕಿಸಿ ವಿಚಾರಿಸುತ್ತಿರಬೇಕು ಮತ್ತು ತಾವೂ ಮಕ್ಕಳ ಕಲಿಕೆ ಮತ್ತು ನಡೆ ನುಡಿಗಳನ್ನು ಗಮನಿಸುತ್ತಿರಬೇಕು ಎಂದು ಸಲಹೆ ನೀಡಿದರು. ಶಿಕ್ಷಣ ಇಲಾಖೆಯಿಂದ ನಡೆದ ಸಭೆಯಲ್ಲಿ ತಿಳಿಸಿರುವಂತೆ ಮೆದುಳು ಜ್ವರದ ನಿಯಂತ್ರಣಕ್ಕೆ ಕೊಡಬೇಕಾದ ಚುಚ್ಚುಮದ್ದು ಲಸಿಕೆಯ ಕುರಿತು ಪೋಷಕರಿಗೆ ವಿವರಿಸಿದರು.

ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯತ್ತ ವಾಲದೆ ತಮ್ಮ ಪ್ರಗತಿಯತ್ತ ಸದಾ ಗಮನ ಹರಿಸಬೇಕು ಮತ್ತು ಪೊಷಕರು ಈ ಕುರಿತು ಕಾಳಜಿ ವಹಿಸಬೇಕು ಎಂದರು.

ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಗೈರುಹಾಜರಿ, ತರಗತಿಯಲ್ಲಿ ವಿದ್ಯಾರ್ಥಿಗಳ ಗಮನ ಮತ್ತು ಶೈಕ್ಷಣಿಕ ಪ್ರಗತಿಯ ಕುರಿತು ಪೋಷಕರಿಗೆ ತಿಳಿಸಿದರು.

ಸಂಸ್ಥೆಯ ಸಂಯೋಜಕಿ ಶ್ರೀಮತಿ ಜಯಂತಿ ಸ್ವಾಗತಿಸಿ,ವಂದಿಸಿದರು.

ನಿರ್ಣಯಗಳು:

ಪೋಷಕರು ವಿದ್ಯಾರ್ಥಿಗಳ ಮೊಬೈಲ್ ಗಳಲ್ಲಿ ಸಾಮಾಜಿಕ ಜಾಲತಾಣಗಳ ಖಾತೆಯನ್ನು ನಿಷ್ಕ್ರಿಯಗೊಳಿಸುವುದು, ವಿದ್ಯಾರ್ಥಿಗಳ ಕಲಿಕೆ ಮತ್ತು ನಡತೆಯ ಬಗ್ಗೆ ಪಾಲಕರ ಮೊಬೈಲ್ ಗಳಿಗೆ ಸಂದೇಶವನ್ನು ಕಳಿಸುವುದು, ಶಾಲಾವಾರ್ಷಿಕೋತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ತಯಾರಿ, ಪರೀಕ್ಷೆ ಮತ್ತು ಇತರ ಚಟುವಟಿಕೆಗಳ ತಯಾರಿ ನಡೆಸುವುದು. ಸ್ಕೌಟ್ಸ್ – ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ” ಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದು ಎಂಬಿತ್ಯಾದಿ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

Highslide for Wordpress Plugin