ಶ್ರೀಚಕ್ರ ಪೂಜೆ

ಶ್ರೀಚಕ್ರ ಪೂಜೆ

ನಂತೂರು ಅ.12 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀ ರುದ್ರ ಸಮಿತಿ, ಕಾಲೇಜು ಸೇವಾ ಸಮಿತಿ, ಮಂಗಳೂರು ಹವ್ಯಕ ಮಂಡಲಗಳ ಜಂಟಿ ಆಶ್ರಯದಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದಗಳೊಂದಿಗೆ ಕಾಲೇಜಿನ ಶ್ರೇಯೋಭಿವೃದ್ಧಿಗಾಗಿ ಲಲಿತಾಪಂಚಮಿಯ ಸಂದರ್ಭದಲ್ಲಿ ಪ್ರಥಮ ಬಾರಿಗೆ ವೇ.ಮೂ.ಗಣೇಶ ಭಟ್ ಪರಕ್ಕಜೆ ನೇತೃತ್ವದಲ್ಲಿ ಮತ್ತು ವೇ.ಮೂ.ಶಿವಪ್ರಸಾದ್ ಭಟ್ ಅಮೈ ಅವರ ಸಹಕಾರದಲ್ಲಿ ಶ್ರೀಚಕ್ರ ಪೂಜೆ ನೆರವೇರಿತು.

ಕಾಲೇಜು ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ, ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಉದಯಶಂಕರ್ ನೀರ್ಪಾಜೆ, ಸಹಕಾರ್ಯದರ್ಶಿ ಪ್ರೊ.ವಿ.ಜಿ.ಭಟ್, ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್, ಕೋರ್ ಕಮಿಟಿ ಸದಸ್ಯ ರಮೇಶ್ ಭಟ್ ಸರವು, ಆಡಳಿತಾಧಿಕಾರಿ ಪ್ರೊ.ಕೆ.ಶಂಕರ ಭಟ್, ಶ್ರೀರುದ್ರ ಸಮಿತಿಯ ಡಾ.ಬಿ.ರಾಜೇಂದ್ರಪ್ರಸಾದ್, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್, ಪ್ರಧಾನಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಕೋಶಾಧ್ಯಕ್ಷ ರಮೇಶ ಭಟ್ ನೂಜಿಬಲು, ದಕ್ಷಿಣ ವಲಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕಾಶಿಮಠ, ಉತ್ತರ ವಲಯಾಧ್ಯಕ್ಷ ಶಿವಶಂಕರ ಭಟ್, ಹವ್ಯಕ ಸಭಾ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಕಬೆಕ್ಕೋಡು, ವೇ.ಮೂ.ಮುಕುಂದ ಶರ್ಮ, ಗೋವಿಂದ ಭಟ್ ದಿವಾಣ, ಗುರಿಕ್ಕಾರ ವಸಂತಚಂದ್ರ ಬೋಳಂತಕೋಡಿ ಮತ್ತು ಇತರ ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭ ಯು.ಕೆ.ಯ ಪ್ರತಿಷ್ಠಿತ ರೋಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಗೌರವ ಫೆಲೋಶಿಪ್ ಪುರಸ್ಕಾರಕ್ಕೆ ಆಯ್ಕೆಯಾದ ಮಂಗಳೂರು ವಿವಿ ರಸಾಯನಶಾಸ್ತ್ರ ವಿಭಾಗ ಪ್ರಾಧ್ಯಾಪಕ ಪ್ರೊ.ಜತ್ತಿ ಈಶ್ವರ ಭಟ್ ಮತ್ತು ಓರಲ್ ಮತ್ತು ಮೇಕ್ಸಿಲ್ಲೋಫೇಶಿಯಲ್ ಸರ್ಜನ್ಸ್ ಅಸೋಸಿಯೇಶನ್ ಆಫ್ ಇಂಡಿಯದಿಂದ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರಾದ ಡಾ.ಬಿ.ರಾಜೇಂದ್ರಪ್ರಸಾದ್ ಅವರನ್ನು ಅಭಿನಂದಿಸಲಾಯಿತು.

Highslide for Wordpress Plugin