ವಿವೇಕಾನಂದರ ವ್ಯಕ್ತಿತ್ವದ ಮಹತ್ವ

ವಿವೇಕಾನಂದರ ವ್ಯಕ್ತಿತ್ವದ ಮಹತ್ವ

ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ಮಾಡಿದ ಭಾಷಣದ 125ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಅವರ ಜೀವನದ ಮಹತ್ವದ ಕುರಿತು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದಿನಾಂಕ 04.10.2018 ರಂದು ಮಂಗಳೂರಿನ ರಾಮಕೃಷ್ಣ ಮಠದ ವತಿಯಿಂದ ಲೇಖಕಿ ಕು. ಅಕ್ಷತಾ ಅವರು ಉಪನ್ಯಾಸ ನೀಡಿದರು. ವಿವೇಕಾನಂದರ ವ್ಯಕ್ತಿತ್ವದ ಬೀಜ ಅವರ ಚಿಂತನೆಯಲ್ಲಿ ಅಡಗಿದೆ ಎಂದು ಹೇಳಿದ ಅವರು, ಜಗತ್ತಿಗೆ ಶಾಂತಿಯ, ನಾಗರಿಕತೆಯ ಪಾಠ ಹೇಳಬೇಕಿದ್ದರೆ ಅದು ಭಾರತದಿಂದ ಮಾತ್ರ ಸಾಧ್ಯ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತನ್ನು ಉಲ್ಲೇಖಿಸಿದರು. ತನ್ನನ್ನು ತಾನು ಸಮಾಜಕ್ಕೆ ಯಾವಾಗ ಅರ್ಪಿಸಿಕೊಳ್ಳಬೇಕು ಎಂದು ಅನಿಸುತ್ತದೆಯೋ ಅದು ಒಬ್ಬ ವ್ಯಕ್ತಿ ಪಡೆಯುವ ನಿಜವಾದ ಶಿಕ್ಷಣ ಎಂದು ವಿವೇಕಾನಂದರು ಸ್ಪಷ್ಟಪಡಿಸಿದ್ದರು ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಈಶ್ವರಪ್ರಸಾದ್ ಅವರು ಮಾತನಾಡುತ್ತಾ ವಿವೇಕಾನಂದರ ವ್ಯಕ್ತಿತ್ವದ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು. ಉಪನ್ಯಾಸಕಿ ಗಂಗಾರತ್ನ ಸ್ವಾಗತಿಸಿ, ಉಪನ್ಯಾಸಕಿ ರಮ್ಯಾ ವಂದಿಸಿದರು.

Highslide for Wordpress Plugin