ಶ್ರೀ ಗುರುಭ್ಯೋ ನಮಃ
ಹರೇ ರಾಮ
ಎಲ್ಲರಿಗೂ ನಮಸ್ಕಾರ
ನಮ್ಮ ಶ್ರೀ ಭಾರತೀ ಸಮೂಹ ಸಂಸ್ಥೆ ಸುಭದ್ರವಾಗಿದೆ. ಅತ್ಯಂತ ಸುದೃಢವಾಗಿದೆ. ಮತ್ತು ಸುಸೂತ್ರವಾಗಿ ನಡೆಯುತ್ತಿದೆ. ಸರಕಾರದ ಕೋವಿಡ್ 19ರ ನೀತಿ, ನಿಯಮಗಳನ್ನು ಪ್ರಾಮಾಣಿಕವಾಗಿ ಅನುಸರಿಸಿಕೊಂಡು ವಿದ್ಯಾರ್ಥಿಗಳ, ಬೋಧಕ, ಬೋಧಕೇತರ ವೃಂದದವರ ಆರೋಗ್ಯ ಮತ್ತು ಕ್ಷೇಮಪಾಲನೆಯನ್ನು ನೋಡಿಕೊಳ್ಳುತ್ತ ಸರ್ವ ಸುಸಜ್ಜಿತವಾಗಿ ನಡೆಯುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಸಂಸ್ಥೆಯ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಕಾಲೇಜು ಮಂಗಳ ಹಾಡಿತು ಎಂದು ಸಂತಸಪಟ್ಟಿದ್ದಾರೆ. ಯಾರೋ ಅವಿದ್ಯಾವಂತರು, ಕಿಡಿಗೇಡಿಗಳು ಈ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆಂದು ನಾವೂ ನೀವೂ ವಿಚಲಿತರಾಗುವ ಆವಶ್ಯಕತೆಯೇ ಇಲ್ಲ.
ಕೆಲಸ ಮಾಡದ, ಅಸಮರ್ಥರನ್ನು ಕಳುಹಿಸಿಕೊಟ್ಟು ಅತ್ಯಂತ ಕ್ರಿಯಾಶೀಲ ಉಪನ್ಯಾಸಕರನ್ನು ನಿಯುಕ್ತಿಗೊಳಿಸಿದ್ದೇವೆ. ಈಗ ಎಲ್ಲಾ ತರಗತಿಗಳೂ ಯಾವುದೇ ಅಡೆತಡೆಯಿಲ್ಲದೇ ನಡೆಯುತ್ತಿದೆ. ಇದನ್ನು ಸಹಿಸದ ಕೆಲ ನಿರುದ್ಯೋಗೀ ಕಿಡಿಗೇಡಿಗಳು ಸಂಸ್ಥೆಯ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ.
- ಆದರೂ ವಿದ್ಯಾಭಿಮಾನಿಗಳು ಗೊಂದಲಕ್ಕೊಳಗಾಗಬಾರದು ಎಂದು ಮನವಿ ಮಾಡುತ್ತಿದ್ದೇವೆ.
ಇಂತಹ ಅನೇಕ ಸವಾಲುಗಳನ್ನು ಮತ್ತೆ ಮತ್ತೆ ಎದುರಿಸಿ ಸಂಸ್ಥೆ ಮತ್ತಷ್ಟು ಗಟ್ಟಿಯಾಗಿದೆ. ಸಂಸ್ಥೆಯನ್ನು ಬೆಳೆಸುವ ಮತ್ತು ಸಾಧಿಸುವ ಹಂಬಲವಿರುವವರು ಇಂತಹ ಕ್ಷುಲ್ಲಕ ವಿಚಾರಗಳತ್ತ ಗಮನಹರಿಸಬೇಕಾಗಿಲ್ಲ. ಆದರೆ ನಮ್ಮ ಶ್ರೀ ಭಾರತೀ ಸಮೂಹ ಸಂಸ್ಥೆಯ ಹಲವು ಮಂದಿ ಹಿತೈಷಿಗಳು, ಅಭಿಮಾನಿಗಳು ಯಶಸ್ವಿಯಾಗಿ ನಡೆಯುತ್ತಿರುವ ಸಂಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೇ ಪ್ರಕಟಣೆ ನೀಡಿ, ಆ ಕಿಡಿಗೇಡಿಗಳು ಪಶ್ಚಾತ್ತಾಪ ಪಡುವಂತೆ ಮಾಡಬೇಕು ಎಂದಿದ್ದಾರೆ. ಅದಕ್ಕಾಗಿ ನಾವು ಈ ಪ್ರಕಟಣೆ ನೀಡಿದ್ದೇವೆ.
ನಮ್ಮ ಸಂಸ್ಥೆ ನಮಗೆ ಹೆಮ್ಮೆ.
ಸೇವಾ ಸಮಿತಿ