ರಿಲಾಯನ್ಸ್ ಜಿಯೋ ಕ್ಯಾಂಪಸ್ ನೇಮಕಾತಿ – 2019

ಶ್ರೀ ಭಾರತೀ ಕಾಲೇಜಿನಲ್ಲಿ ರಿಲಾಯನ್ಸ್ ಜಿಯೋ ಇದರ ವತಿಯಿಂದ ಕಾಲೇಜಿನ ಉದ್ಯೋಗ ಮಾಹಿತಿ ಕೇಂದ್ರದ ಸಹಯೋಗದೊಂದಿಗೆ ದಿನಾಂಕ ೨೧.೦೩.೨೦೧೯ರಂದು ಕ್ಯಾಂಪಸ್ ನೇಮಕಾತಿಯನ್ನು (campus recruitment) ನಡೆಸಲಾಯಿತು. ಶ್ರೀ ಶ್ರೀಸ್ಟೀತ್ ಹರೀಶ್, ಅಸಿಸ್ಟಂಟ್ ಮ್ಯಾನೇಜರ್, ಊಖ ಆeಠಿಣ., ರಿಲಾಯನ್ಸ್ ಜಿಯೋ ಇವರು ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ನಡೆಸಿಕೊಟ್ಟರು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅಂತಿಮ ಪದವಿಯ ೩೨ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಹಳೆವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಈಶ್ವರ ಪ್ರಸಾದ್ ಇವರು, ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಉಪನ್ಯಾಸಕ ವೃಂದದವರು ಸಹಕರಿಸಿದರು. ಕಾಲೇಜಿನ ಉದ್ಯೋಗ ಮಾಹಿತಿ ಕೇಂದ್ರದ ಸಂಯೋಜಕರಾದ ಶ್ರೀಮತಿ ಜಯಂತಿ ಕೆ. ಸ್ವಾಗತಿಸಿ, ಶ್ರೀ ಪ್ರವೀಣ್ ವಂದಿಸಿದರು.

Highslide for Wordpress Plugin