ರಕ್ಷಕ-ಶಿಕ್ಷಕ ಸಂಘದ ಸಭೆ 2018-19
ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಡಳಿತ ಮಂಡಳಿ ಬದ್ಧ : ಹಾರಕರೆ ನಾರಾಯಣ ಭಟ್
ನಂತೂರು, ಅ.11 : ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪ್ರಗತಿಯಲ್ಲಿ ವಿದ್ಯಾರ್ಥಿಗಳು, ಹೆತ್ತವರು ಹಾಗೂ ಉಪನ್ಯಾಸಕರ ಪಾತ್ರ ಬಹಳ. ಇವರಿಗೆ ಪೂರಕವಾಗಿ ಸೇವಾ ಸಮಿತಿಯು ಎಲ್ಲ ವ್ಯವಸ್ಥೆಗಳನ್ನು ಒದಗಿಸುತ್ತದೆ. ವಿದ್ಯಾರ್ಥಿಗಳ ಭವಿಷ್ಯವನ್ನು ಸುದೃಢಗೊಳಿಸಲು ಆಡಳಿತ ಮಂಡಳಿ ಬದ್ಧವಾಗಿದೆ. ಒಟ್ಟಿನಲ್ಲಿ ಎಲ್ಲರ ಗುರಿಯೂ ಒಂದೇ ಆಗಿದ್ದು, ಸರ್ವ ರೀತಿಯ ಸಹಕಾರ ಅತೀ ಅಗತ್ಯ ಎಂದು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ತಿಳಿಸಿದರು.
ಅವರು ಶುಕ್ರವಾರ ಮಂಗಳೂರು ನಂತೂರು ಪದವು ಶ್ರೀ ಭಾರತೀ ಪದವಿ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ವಿನಯ ಭಾರದ್ವಾಜ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಕಾಲೇಜಿನ ಹಿತರಕ್ಷಣೆ, ವಿದ್ಯಾರ್ಥಿಗಳ ಶಿಸ್ತು, ಹೆತ್ತವರ ಭಾಗವಹಿಸುವಿಕೆ ಅತೀ ಅವಶ್ಯ. ವಿದ್ಯಾರ್ಥಿಗಳ ಕಲಿಕಾಗತಿಯನ್ನು ಪರಿಶೀಲಿಸುತ್ತಿರಬೇಕು ಮತ್ತು ಅದಕ್ಕಾಗಿ ಕಾಲೇಜಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಸಮಿತಿ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್, ಸದಸ್ಯ ರಮೇಶ್ ಭಟ್ ಸರವು, ಆಡಳಿತಾಧಿಕಾರಿ ಪ್ರೊ.ಕೆ.ಶಂಕರ ಭಟ್ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಗಂಗಾರತ್ನ ಮುಗುಳಿ, ಅನುಷಾ. ಎಸ್. ರೈ, ಶರ್ಮಿಳಾ, ಸತ್ಯನಾರಾಯಣ ಪ್ರಸಾದ್, ಅಶೋಕ್ ಎಸ್., ಪ್ರವೀಣ್, ರಮ್ಯಾ, ರಾಜಶೇಖರ್, ಗ್ರಂಥಪಾಲಕಿ ಜಯಂತಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಅಧ್ಯಕ್ಷರಾಗಿ ವಿನಯ ಭಾರದ್ವಾಜ್ ಅವರು ಮರುಆಯ್ಕೆಗೊಂಡರು.
ಪ್ರಾಂಶುಪಾಲ ಡಾ.ಈಶ್ವರಪ್ರಸಾದ್ ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ವರದಿ ಮಂಡಿಸಿದರು. ಉಪನ್ಯಾಸಕಿ ಕಾವ್ಯಾ ವಂದಿಸಿದರು. ಉಪನ್ಯಾಸಕಿ ಕುಸುಮಾವತಿ ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು.