*ಭಾರತೀ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ* ಮಂಗಳೂರು : ಮಾರ್ಚ್ 5 : ನಗರದ ನಂತೂರು ಪದವಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ಜೇ ಸಿ ಐ ಮಂಗಳೂರು ಶ್ರೇಷ್ಠ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಹದಿ ಹರೆಯದ ಸಮಸ್ಯೆಗಳು ಮತ್ತು ಆತ್ಮ ರಕ್ಷಣೆಯ ಬಗ್ಗೆ ತರಭೇತಿ ಕಾರ್ಯಾಗಾರವನ್ನು ಸಂಸ್ಥೆಯ ಪದವಿ ವಿದ್ಯಾರ್ಥಿಗಳಿಗೆ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಮಾಧುರಿ ಹೊಳ್ಳ ಮನಶಾಸ್ತ್ರ ತಜ್ಞರು ಶ್ರೀ ಜಯಶ್ರೀ ನರ್ಸಿಂಗ್ ಹೋಮ್ ಮಂಗಳೂರು ಹಾಗು ಶ್ರೀ ಚಂದ್ರಶೇಖರ್ ಕನಕಮಜಲು, ಕರಾಟೆ ತರಬೇತಿದಾರರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಶುಪಾಲರಾದ ಜೀವನದಾಸ್ ಎ ಅವರು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಶುಪಾಲರಾದ ಗಂಗಾರತ್ನ, ಜೇ ಸಿ ಐ ಮಂಗಳೂರು ಶ್ರೇಷ್ಠದ ಅಧ್ಯಕ್ಷರಾದ ರವಿಚಂದ್ರ ಪಾಟಾಳಿ ಜೇಸಿರೇಟ್ ಅಧ್ಯಕ್ಷರಾದ ದೀಕ್ಷಾ, ನಿಕಟ ಪೂರ್ವ ಅಧ್ಯಕ್ಷರು ಹಾಗೂ ಜೇ ಸಿ ಐ ವಲಯ ಸಂಯೋಜಕಿಯು ಆದ ಲತಾ ಡಿ ಸುವರ್ಣ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು