ಭಾರತೀ ಕಾಲೇಜಿನಲ್ಲಿ ಒಂದು ದಿನದ ಎನ್ ಎಸ್ ಎಸ್ ಶಿಬಿರ 2018-19

ನಂತೂರು, ಆ.12 : ದಿನಾಂಕ 12-8-2018ರಂದು ಶಾಲೆ, ಕಾಲೇಜು ಇಲ್ಲ. ಆದಿತ್ಯವಾರ ಅಲ್ವಾ? ಆದರೆ ಶ್ರೀ ಭಾರತೀ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಹೊರಟು ಬೆಳಗ್ಗೆ 9 ಗಂಟೆಗೆ ಕಾಲೇಜಿಗೆ ತಲುಪಿದ್ದಾರೆ. ಆದರೆ ಕೈಯಲ್ಲಿ ಪುಸ್ತಕ, ಬ್ಯಾಗ್ ಇರಲಿಲ್ಲ. ಕೈಯಲ್ಲಿ ಕತ್ತಿ, ಹಾರೆ, ಪಿಕ್ಕಾಸು. ಕಾರಣ ಗೊತ್ತೇ ?

ಶ್ರೀ ಭಾರತೀ ಪದವಿ ಕಾಲೇಜು ವಿಭಾಗದ ನೇತೃತ್ವದಲ್ಲಿ ಎನ್ ಎಸ್ ಎಸ್ ಶಿಬಿರ. ಒಂದು ದಿನದ ಶಿಬಿರ ಕಾಲೇಜಿನ ವಠಾರವನ್ನು ಸ್ವಚ್ಛಗೊಳಿಸಲಿಕ್ಕಾಗಿ ಮೀಸಲು. ಆದಿತ್ಯವಾರ ಆಗಿದ್ರೂ ಬಂದಿದ್ರು. ಜತೆಗೆ ಹೈಸ್ಕೂಲ್, ಪದವಿಪೂರ್ವ ಕಾಲೇಜಿನ ಕೆಲ ವಿದ್ಯಾರ್ಥಿಗಳ ಸಾಥ್. ಬೆಳಗ್ಗೆ ಕಾಲೇಜಿನ ಪ್ರವೇಶ ದ್ವಾರದಿಂದಲೇ ಸ್ವಚ್ಛತೆಯ ಕೈಂಕರ್ಯವನ್ನು ಆರಂಭಿಸಿದರು. ವಿದ್ಯಾರ್ಥಿಗಳು ಕಳೆ ಕಿತ್ತರು, ಕಸ ಹೆಕ್ಕಿದರು. ಬೆಳೆದ ಮರಗಳನ್ನು ಕ್ರಾಪ್ ಮಾಡಿದರು. ಹಾರೆಯಲ್ಲಿಯೂ ನೆಲದ ಹುಲ್ಲು ಕಿತ್ತರು, ಸಮತಟ್ಟಾಗಿಸಿದರು.

ವಿಶೇಷವೆಂದರೆ ವಿದ್ಯಾರ್ಥಿಗಳದ್ದೇ ಅಡುಗೆ ಕಾರುಬಾರು. ಬೆಳಗ್ಗೆ ಅವಲಕ್ಕಿ, ಚಕ್ಕುಲಿ, ಸ್ನಾಕ್ಸ್, ಮಾಲ್ಟ್ ಇತ್ಯಾದಿ. ಮಧ್ಯಾಹ್ನ ಗಂಜಿ ಚಟ್ನಿ, ಹಪ್ಪಳ, ಉಪ್ಪಿನಕಾಯಿ, ಸಾಟ್(ಸಿಹಿ), ಮಜ್ಜಿಗೆ. ಸಂಜೆ ಕ್ರೀಮ್ ಬನ್. ಈ ತಿಂಡಿ ತಿನಸುಗಳೂ ಕೊಡುಗೆಯ ಹಬ್ಬ. ಈ ಕೊಡುಗೆಗಳಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳು, ಎನ್ನೆಸ್ಸೆಸ್ ಶಿಬಿರಾಧಿಕಾರಿ ಅಶೋಕ್, ಸಹಶಿಬಿರಾಧಿಕಾರಿ ಪ್ರವೀಣ್, ಗಂಗಾರತ್ನ ಮುಗುಳಿ, ಸತೀಶಣ್ಣ, ಮೋಂತಿಮಾರು ಪಾರ್ವತಿ ಅಮ್ಮ, ಸೇವಾ ಸಮಿತಿಯ ಗಣೇಶಮೋಹನ ಕಾಶಿಮಠ, ಶ್ರೀಕೃಷ್ಣ ನೀರಮೂಲೆ, ಎಂ.ಟಿ.ಭಟ್, ಅವರೆಲ್ಲರೂ ಪಾಲುದಾರರು.

ಪ್ರಾಂಶುಪಾಲ ಡಾ.ಈಶ್ವರಪ್ರಸಾದ ಎ., ಹಿರಿಯ ಉಪನ್ಯಾಸಕಿಯರಾದ ಸುಭದ್ರಾ ಮೇಡಮ್, ಗಂಗಾರತ್ನ ಮುಗುಳಿ, ಎನ್ನೆಸ್ಸೆಸ್ ಶಿಬಿರಾಧಿಕಾರಿ ಅಶೋಕ್, ಸಹಶಿಬಿರಾಧಿಕಾರಿ ಪ್ರವೀಣ್, ಉಪನ್ಯಾಸಕಿಯರಾದ ಸ್ವಾತಿ, ಕಾವ್ಯಾ, ರಮ್ಯಾ, ಸತೀಶಣ್ಣ ಅವರೆಲ್ಲರ ಮಾರ್ಗದರ್ಶನ, ಸಹಕಾರ.

ಇದು ಪ್ರಾಯೋಗಿಕ ಕಾರ್ಯ. ಆದರೆ ಇದನ್ನು ವಿದ್ಯಾರ್ಥಿಗಳ ಕಾರ್ಯವೆಂದು ಕಡೆಗಣಿಸುವಂತಿಲ್ಲ. ಉತ್ತಮ ಹಾಗೂ ಶ್ಲಾಘನೀಯ ಕಾರ್ಯ ಎನ್ನಲೇಬೇಕು. ಸತ್ಕಾರ್ಯದಲ್ಲಿ ತೊಡಗಿಸಿಕೊಂಡ ೬೦ಕ್ಕೂ ಅಧಿಕ ವಿದ್ಯಾರ್ಥಿಗಳು ಅಭಿನಂದನಾರ್ಹರು. ಕಾಲೇಜಿನ ಎನ್ನೆಸ್ಸೆಸ್ ಘಟಕದ ಶಿಬಿರಾಧಿಕಾರಿ ಅಶೋಕ್, ಸಹಶಿಬಿರಾಧಿಕಾರಿ ಪ್ರವೀಣ್ ಅವರ ಉತ್ಸಾಹ, ಹಿರಿಯ ಉಪನ್ಯಾಸಕರ ಪ್ರೋತ್ಸಾಹ, ಕಿರಿಯರ ಸಹಕಾರ, ಸತೀಶಣ್ಣನ ಜಾವಾಬ್ದಾರಿ ಮೆಚ್ಚುವಂತಾದ್ದು.

Highslide for Wordpress Plugin