ಪ.ಪೂ ಮತ್ತು ಪ್ರೌಢಶಾಲಾ ವಿಭಾಗಗಳ ಶಿಕ್ಷಕ – ರಕ್ಷಕ ಸಂಘದ ಸಭೆ

ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ  ದಿನಾಂಕ 17-9-22 ರಂದು ಪ.ಪೂ ಮತ್ತು ಪ್ರೌಢಶಾಲಾ ವಿಭಾಗಗಳ ಶಿಕ್ಷಕ – ರಕ್ಷಕ ಸಂಘದ ಸಭೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೇವಾ ಸಮಿತಿಯ ಆಡಳಿತಾಧಿಕಾರಿಗಳಾದ ಪ್ರೊ.ಶಂಕರ ಭಟ್ ಕಿನಿಲ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನವನ್ನು ಪಡೆಯುವುದರ ಜೊತೆಗೆ ಗುರುಹಿರಿಯರೊಂದಿಗಿರುವ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡಾಗ ಅವರ ಬದುಕು ಸಾರ್ಥಕವೆನಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸೇವಾಸಮಿತಿಯ ಕೋಶಾಧಿಕಾರಿಗಳಾದ ಶ್ರೀ ಉದಯಶಂಕರ್ ನೀರ್ಪಾಜೆ ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ, ನಮ್ಮ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ಕೊಡುತ್ತಿರುವುದರಲ್ಲಿ ಎರಡು ಮಾತಿಲ್ಲ; ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯು ಸರ್ವಸಹಕಾರ ನೀಡುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸುರೇಶ್ ಶೆಣೈ ಅವರು ಪೋಷಕರೆಲ್ಲರೂ ವಿದ್ಯಾರ್ಥಿಗಳ ಮತ್ತು ಸಂಸ್ಥೆಯ ಅಭಿವೃದ್ಧಿಗಾಗಿ ಒಟ್ಟಾಗಿ ಶ್ರಮಿಸಬೇಕು ಎಂದರು.

ಪ್ರಾಂಶುಪಾಲರಾದ ಗಂಗಾರತ್ನ, ನಮ್ಮ ಸಂಸ್ಥೆಯು, ಹೃದಯವಂತರನ್ನು ಸಮಾಜಕ್ಕೆ ನೀಡಬೇಕೆಂಬ ಶ್ರೀ ಗುರುಗಳ ಆಶಯವನ್ನು ಈಡೇರಿಸಲು ಸಂಕಲ್ಪಬದ್ಧವಾಗಿದೆ ಎಂದರು.

ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಪ್ರತಿಮ್ ಕುಮಾರ್, ವಿದ್ಯಾರ್ಥಿಗಳಿಗೆ ಶಿಸ್ತು ಪಾಲನೆಯ ಮಹತ್ವವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ವಾರ್ಷಿಕ ಸಂಚಿಕೆ ಮಂಗಲಭಾರತೀ 2021-22 ಬಿಡುಗಡೆ ಮಾಡಲಾಯಿತು.

ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀ ಸುರೇಶ್ ಶೆಣೈ ಅವರು ಮರು ಆಯ್ಕೆಗೊಳ್ಳುವುದರೊಂದಿಗೆ  ನೂತನ ಪದಾಧಿಕಾರಿಗಳನ್ನು ಒಳಗೊಂಡ ಹೊಸ ಸಮಿತಿಯು ರಚನೆಗೊಂಡಿತು.

ಶಿಕ್ಷಕಿಯರಾದ  ಭಾರತೀ ಸ್ವಾಗತಿಸಿ ಶ್ರೀಮತಿ ಪವಿತ್ರಾ ವಂದಿಸಿದರು. ಶ್ರೀಮತಿ ರಶ್ಮಿ ವರದಿವಾಚನ ಮಾಡಿದರು. ಸುಶ್ಮಿತಾ ನಿರೂಪಣೆಗೈದರು.

 

Highslide for Wordpress Plugin