ಸರಕಾರಿ ಪ್ರೌಢ ಶಾಲೆ , ಬೈಕಂಪಾಡಿಯ 10ನೇ ತರಗತಿಯ ವಿಧ್ಯಾರ್ಥಿಗಳಿಗೆ “ಪ್ರೇರಣ” ವತಿಯಿಂದ ಪರೀಕ್ಷೆಗಳಲ್ಲಿ ಧನಾತ್ಮಕ ಉತ್ತರಿಸುವಿಕೆ ತರಬೇತಿ
ಭವಿಷ್ಯದ ಕುರಿತು ಹೆದರದೆ ಆತಂಕ ಪಡದೆ ,ವರ್ತಮಾನದ ಸವಾಲುಗಳನ್ನು ಆತ್ಮವಿಶ್ವಾಸ, ಬುದ್ದಿವಂತಿಗೆ ಜಾಣ್ಮೆಗಳಿಂದ ಯೆದುರಿಸಿದರೆ ಸೊಲು ಗೆಲುವಾಗಬಹುದು. ಇದೇ ತತ್ವವನ್ನು ಪರೀಕ್ಷೆಗಳಲ್ಲಿ ಅಳವಡಿಸಿದಾಗ ಪರೀಕ್ಷಾಭಯ ನಿವಾರಣೆಯಾಗಿ ಉತ್ತಮ ಅಂಕಗಳನ್ನು ಗಳಿಸಬಹುದು ಎಂದು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಮಾನವ ಅಭಿವ್ರಧ್ಹಿ ಘಟಕ “ಪ್ರೇರಣ” ದ ಮಾರ್ಗದರ್ಶಕ ಪ್ರೊ. ವಿಶ್ವೇಶ್ವರ ಭಟ್ ಅವರು ವಿಧ್ಯಾರ್ಥಿಗಳಿಗೆ ತಿಳಿಹೇಳಿದರು.
ಸರಕಾರಿ ಪ್ರೌಢ ಶಾಲೆ , ಬೈಕಂಪಾಡಿಯ ೧೦ನೇ ತರಗತಿಯ ವಿಧ್ಯಾರ್ಥಿಗಳಿಗೆ “ಪ್ರೇರಣ” ವತಿಇಂದ ಹಮ್ಮಿಕೊಂಡಿದ್ದ “ಪರೀಕ್ಷೆಗಳಲ್ಲಿ ಧನಾತ್ಮಕ ಉತ್ತರಿಸುವಿಕೆ” ತರಬೇತಿಯಲ್ಲಿ ಅವರು ಮಾತನಾಡಿದರು.ಸಂಘಟಕ ಶ್ರೀ ಅನಂತ ನಾರಾಯಣ ಪದಕಣ್ಣಾಯರು ಚಟುವಟಿಕೆಗಳನ್ನು ನಡೆಸಿಕೊಟ್ಟರು.
ಪ್ರಭಾರ ಮುಕ್ಯ ಶಿಕ್ಶಕ ವಿಜೆತ್ ಉಪಸ್ತಿತರಿದ್ದರು. ಕನ್ನಡ ಭಾಷ ಉಪನ್ಯಸಕ ಶ್ರೀ ಅನಂತ ಪದ್ಮನಾಭ ಸ್ವಾಗತಿಸಿ ವಂದಿಸಿದರು.