ಪ್ರೇರಣಾ – 2018

*ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರ : ಪ್ರೇರಣಾ ಕಾರ್ಯಾಗಾರ*

ನಂತೂರು ಡಿ.5 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ “ಪ್ರೇರಣಾ” ವತಿಯಿಂದ ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಮಾರ್ಗದರ್ಶನ, *”ಪರೀಕ್ಷೆಗಳಲ್ಲಿ ಧನಾತ್ಮಕ ಉತ್ತರಿಸುವಿಕೆ”* ಕಾರ್ಯಾಗಾರ ಮಂಗಳವಾರ ನಡೆಯಿತು.
ಪ್ರೇರಣಾ ಸಂಯೋಜಕ ಯು.ಎಸ್.ವಿಶ್ವೇಶ್ವರ ಭಟ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸರಳತೆಯಿಂದ ಕ್ಲಿಷ್ಟತೆಯೆಡೆಗೆ, ಉತ್ತೀರ್ಣನಾಗುವೆನೆಂಬ ಮಾನಸಿಕತೆ, ಉತ್ತರ ಗೊತ್ತಿರುವ ಪ್ರಶ್ನೆಗಳಿಂದ ಉತ್ತರಿಸತೊಡಗುವುದು, ಎಲ್ಲ ಪ್ರಶ್ನೆಗಳಿಗೂ ಉತ್ತರಗಳನ್ನು ಬರೆಯಲು ಯತ್ನಿಸುವುದು ಮುಂತಾದ ಧನಾತ್ಮಕ ಕಾರ್ಯಗಳಿಂದ ಪರೀಕ್ಷೆಯ ಕುರಿತಂತಿರುವ ಭಯ ಮಾಯವಾಗಿ ಆತ್ಮವಿಶ್ವಾಸ ಹೆಚ್ಚಿಸಿ ಗೆಲ್ಲಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಘಟಕದ ಸಂಯೋಜಕ ಉಪನ್ಯಾಸಕ ಅನಂತನಾರಾಯಣ ಪದಕಣ್ಣಾಯ ಸಹಕರಿಸಿದರು. ಪ್ರಶಾಂತಿ ವಿದ್ಯಾ ಕೇಂದ್ರದ ಪ್ರಾಂಶುಪಾಲ ಅನೂಪ್ ಸ್ವಾಗತಿಸಿ, ವಂದಿಸಿದರು. ಸಂಸ್ಥೆಯ ಮೆನೇಜಿಂಗ್ ಟ್ರಸ್ಟಿ ಎಚ್.ಮಹಾಲಿಂಗ ಭಟ್ ಉಪಸ್ಥಿತರಿದ್ದರು.
Highslide for Wordpress Plugin