ಪ್ರಕೃತಿಯ ಬಗ್ಗೆ ಧನಾತ್ಮಕ ಚಿಂತನೆ ಅಗತ್ಯ – ರೊ. ಶ್ರೀಧರ್‌, ಮಂಗಳೂರು ಅರಣ್ಯ ವಲಯಾಧಿಕಾರಿ

ಪ್ರಕೃತಿಯ ಬಗ್ಗೆ ಧನಾತ್ಮಕ ಚಿಂತನೆ ಅಗತ್ಯ
– ರೊ. ಶ್ರೀಧರ್‌, ಮಂಗಳೂರು ಅರಣ್ಯ ವಲಯಾಧಿಕಾರಿ

ದಿನಾಂಕ 12.07.2021, ಸೋಮವಾರದಂದು, ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೋವರ್ಸ್‌ ಮತ್ತು ರೇಂಜರ್ಸ್‌ ಹಾಗೂ ರೋಟರಿ ಕ್ಲಬ್‌, ಮಂಗಳೂರು ಹಿಲ್ಸೈಡ್‌ ಸಹಭಾಗಿತ್ವದೊಂದಿಗೆ ಕಾಲೇಜಿನ ಆವರಣದಲ್ಲಿ ವನಮಹೋತ್ಸವ ಆಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ಅರಣ್ಯ ವಲಯಾಧಿಕಾರಿ ರೊ. ಶ್ರೀಧರ್‌ ಅವರು ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಬ್ಬ ಮನುಷ್ಯನ ಉಸಿರಾಟಕ್ಕೆ ೩ ಸಸ್ಯಗಳು ನೀಡುವ ಆಮ್ಲಜನಕದ ಅಗತ್ಯವಿದೆ. ಆದ್ದರಿಂದ ಪ್ರತಿಯೊಬ್ಬರೂ ಸ್ಥಳಾವಕಾಶವಿದ್ದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದರು.
ರೋಟರಿ ಕ್ಲಬ್‌, ಮಂಗಳೂರು ಇದರ ಅಧ್ಯಕ್ಷರಾದ ರೊ. ಪ್ರವೀಣಚಂದ್ರ ಶರ್ಮ ಅವರು ಮಾತನಾಡಿ, ಗಿಡಗಳನ್ನು ನೆಟ್ಟರೆ ಸಾಲದು, ಗಿಡಗಳನ್ನು ಪೋಷಿಸಿ, ಬೆಳೆಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ರೋವರ್ಸ್‌ ಮತ್ತು ರೇಂಜರ್ಸ್‌ ನಾಯಕರಾದ ಶ್ರೀ ಪ್ರತಿಮ್‌ ಕುಮಾರ್‌, ರಾ.ಸೇ.ಯೋಜನಾ ಘಟಕದ ನಾಯಕ ದೀಕ್ಷಿತ್‌, ಸ್ವಯಂಸೇವಕರು ಹಾಗೂ ಕಾಲೇಜು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೀವನ್‌ದಾಸ್‌ ಅವರು ಸ್ವಾಗತಿಸಿ, ಉಪ ಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ ವಂದಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಕಾರ್ಯದರ್ಶಿಗಳಾದ ರೊ. ಮನೀಶ್‌ ರಾವ್‌, ವಲಯ ಸೇನಾನಿ ರೊ. ಸತೀಶ್‌. ಬಿ.ಕೆ. ರೊ. ಸುರೇಶ ಕಿಣಿ, ರೊ. ರಂಗನಾಥ ಕಿಣಿ, ರೊ. ಡಾ. ಅಬ್ರಾಹಂ ಝಕಾರಿಯಾಸ್‌, ರೊ. ಶ್ಯಾಮಲಾಲ್‌ ವೈ, ರೊ. ವಿಷ್ಣುದಾಸ ಶೇವಗೂರ್‌, ರೊ. ಅಶೋಕ ರಾವ್‌, ರೊ. ಎಸ್‌.ಸಿ. ಶರ್ಮ ಹಾಗೂ ಶ್ರೀಮತಿ ವೀಣಾ ಬಿ.ಕೆ.ಯವರು ಉಪಸ್ಥಿತರಿದ್ದರು. ರಾ. ಸೇ. ಯೋಜನಾ ಘಟಕದ ಸ್ವಯಂಸೇವಕರು ಗಿಡಗಳನ್ನು ನೆಟ್ಟು ವನಮಹೋತ್ಸವವನ್ನು ಆಚರಿಸಿದರು.

Highslide for Wordpress Plugin