ನಂತೂರು, ಆ.19 : ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ “ಪಶು ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗ, ಮಾಹಿತಿ” ಬಗ್ಗೆ ಕಾರ್ಯ ನಡೆಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಾತನಾಡಿದ, ಡಾ.ವೈ.ವಿ. ಕೃಷ್ಣಮೂರ್ತಿ ಅವರು ಪಶು ವೈದ್ಯಕೀಯ ವಿಭಾಗದ ಮಹತ್ವ, ಸರಕಾರಿ ಕ್ಷೇತ್ರದಲ್ಲಿ ಇದರ ಆದ್ಯತೆಯ ಕುರಿತು ಮಾಹಿತಿ ನೀಡಿದರು. ಪಶು ವೈದ್ಯಕೀಯ ಅಭ್ಯಸಿಸುವುದಕ್ಕಾಗಿ ಡಿಪ್ಲೋಮ ಕೋರ್ಸ್ ಗಳು ಇವೆ. ವಿದ್ಯಾರ್ಥಿಗಳು ಆಸಕ್ತರಾಗಿದ್ದಲ್ಲಿ ಸಿಇಟಿಯಲ್ಲಿ ಕನಿಷ್ಠ 1000 ರ್ಯಾಂಕ್ ನೊಳಗೆ ಸ್ಥಾನ ಪಡೆಯಬೇಕು ಎಂದು ಹೇಳಿದರು.
ಪ್ರಾಂಶುಪಾಲರಾದ ಗಂಗಾರತ್ನ, ಉಪನ್ಯಾಸಕಿ, ಕೋ ಆರ್ಡಿನೇಟರ್ ಶೋಭಾ ಅವರು ಉಪಸ್ಥಿತರಿದ್ದರು.
ಉಪನ್ಯಾಸಕ, ವಾಣಿಜ್ಯ ಸಂಘದ ಕೋ ಆರ್ಡಿನೇಟರ್ ಕಾರ್ತಿಕ್ ಕೃಷ್ಣ ಪ್ರಸ್ತಾವಿಸಿದರು.
ವಿದ್ಯಾರ್ಥಿಗಳಾದ ಕಾರ್ತಿಕ್ ಸ್ವಾಗತಿಸಿ, ಭವಿಷ್ ವಂದಿಸಿದರು. ದನಿಷಾ ಕಾರ್ಯಕ್ರಮ ನಿರೂಪಿಸಿದರು.