ವಿದ್ಯಾರ್ಥಿಗಳು ಸ್ವಸಾಮರ್ಥ್ಯದಲ್ಲಿ ನಂಬಿಕೆ ಇಡಬೇಕು
— ಕಾರ್ಪೋರೇಟರ್ ಶಕೀಲಾ ಕಾವ
ಶ್ರೀ ಭಾರತೀ ವಿದ್ಯಾಸಂಸ್ಥೆ ನನಗೆ ಅತ್ಯಂತ ಪ್ರಿಯವಾದ ವಿದ್ಯಾದೇಗುಲ.ಇಲ್ಲಿಯ ಶಿಕ್ಷಕ ವೃಂದದ ಪರಿಶ್ರಮ ಮೆಚ್ಚುವಂತಾದ್ದು. ಈ ಸಂಸ್ಥೆಗೆ ಸೇರಿದ ವಿದ್ಯಾರ್ಥಿಗಳು ಪುಣ್ಯವಂತರು. ನಾಯಕರಾಗಿ ಆಯ್ಕೆಯಾದ ವಿವಿಧ ಸಂಘಗಳ ಪದಾಧಿಕಾರಿಗಳು ತಮಗೆ ಸಿಕ್ಕಿದ ಜವಾಬ್ದಾರಿಗಳನ್ನು ಬರಿಯ ಅಧಿಕಾರವೆಂದು ಪರಿಗಣಿಸದೆ ಸ್ವಸಾಮರ್ಥ್ಯದಿಂದ ಪ್ರಾಮಾಣಿಕ ಪ್ರಯತ್ನ ಮಾಡಿ ಸಂಸ್ಥೆಗೆ ಕೀರ್ತಿಯನ್ನು ತರಬೇಕು ಎಂದು ಕಾರ್ಪೋರೇಟರ್ ಶ್ರೀಮತಿ ಶಕೀಲಾ ಕಾವ ನುಡಿದರು.
ಅವರು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ವಿದ್ಯಾರ್ಥಿಸಂಘದ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪೆರ್ಮನ್ನೂರು ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಹೇಶ್ ಬಾಬು ಅವರು ಇತರ ವಿವಿಧ ಸಂಘಗಳನ್ನು ಉದ್ಘಾಟಿಸಿ, ಮಾತನಾಡಿ,ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಅಗತ್ಯಕ್ಕೆ ತಕ್ಕಂತೆ ಮಿತಿಯಲ್ಲಿ ಬಳಸಿಕೊಳ್ಳಬೇಕು. ಜೊತೆಗೆ ಹೆತ್ತವರನ್ನು ಗೌರವದಿಂದ ಕಾಣುವ ಸದ್ಗುಣವನ್ನು ಮೈಗೂಡಿಸಿಕೊಂಡು ಸಹೃದಯ ವ್ಯಕ್ತಿಗಳಾಗಿ ಬೆಳೆಯಬೇಕು ಎಂದರು.
ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ರಾಜಗೋಪಾಲ್ .ಜಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ವಿದ್ಯಾರ್ಥಿಗಳು ತಮ್ಮ ಬೆಳವಣಿಗೆಯ ಜೊತೆಗೆ ಸಂಸ್ಥೆಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುತ್ತಾ ತಾವೂ ಬೆಳೆಯಬೇಕು ಎಂದರು.
ಮುಖ್ಯ ಅತಿಥಿಗಳಾದ ಸೇವಾಸಮಿತಿಯ ಕಾರ್ಯಾಲಯ ಕಾರ್ಯದರ್ಶಿ ಶ್ರೀ ಎಮ್ ಟಿ ಭಟ್ ಅವರು ಸಂಸ್ಥೆಯ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಪ್ರಾಂಶುಪಾಲರಾದ ಗಂಗಾರತ್ನ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಉಪನ್ಯಾಸಕ ಕಾರ್ತಿಕ್ ಕೃಷ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು ಹಾಗೂ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಪ ಪೂ ವಿಭಾಗದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ವಿಖ್ಯಾತ್,ವರುಣ್,ರಾಕೇಶ್,
ಸುಶಾಂತ್ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕರಾದ ಹೃತಿಕ್, ಯಶಸ್ ಇವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ಸಮಾರಂಭದಲ್ಲಿ ವಿವಿಧ ಸಂಘಗಳ ಪದಾಧಿಕಾರಿಗಳು, ಸಂಸ್ಥೆಯ ಎಲ್ಲ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಸಂಜಯ್ ಬೇಕಲ್,ಗಾಯತ್ರೀ ಶ್ರೀನಿವಾಸ್ ಮತ್ತು ಸೌಮ್ಯಾ ಶೆಟ್ಟಿ ಗಣ್ಯರನ್ನು ಪರಿಚಯಿಸಿದರು.
ಉಪನ್ಯಾಸಕ ರೋಶನ್ ಕುಮಾರ್ ಸ್ವಾಗತಿಸಿ ದೈಹಿಕ ಶಿಕ್ಷಣ ಶಿಕ್ಷಕ ನಿತಿನ್ ಕುಮಾರ್ ವಂದಿಸಿದರು. ಉಪನ್ಯಾಸಕ ಜ್ಯೋತಿಷ್‌ಕುಮಾರ್ ಕಾರ್ಯಕ್ರಮ
ನಿರೂಪಿಸಿದರು