ನಂತೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರ

ನಿಮ್ಮ ಪ್ರೀತಿಗೆ ಆಭಾರಿಯಾಗಿದ್ದೇನೆ ಡಾ|| ಮುಳ್ಳಂಕೊಚ್ಚಿ

ನಂತೂರು, ಫೆ.5 : ವೈದ್ಯಕೀಯ ವೃತ್ತಿ ಎನ್ನುವುದು ಸೇವಾ ಹಿನ್ನಲೆಯಲ್ಲಿ ಮಾನವೀಯ ಕಳಕಳಿಯಿಂದ ರೋಗಿಗೆ ಚಿಕಿತ್ಸೆ ನೀಡುವ ಒಂದು ವೃತ್ತಿಯಾಗಿದೆ. ಇವರಲ್ಲಿ ವ್ಯಾಪಾರಿ ಮನೋಭಾವ ಬರಲೇಬಾರದು. ವೈದ್ಯನಾದವನು ರೋಗಿಯ ಚಿಕಿತ್ಸೆಯಲ್ಲಿಯೇ ನೆಮ್ಮದಿ ಪಡೆದುಕೊಳ್ಳಬೇಕು ಮತ್ತು ವೃತ್ತಿಯ ರಾಜಧರ್ಮವನ್ನು ಪಾಲಿಸಬೇಕು. ರೋಗಿ ಮತ್ತು ವೈದ್ಯರ ಸಂಬಂಧ ಹದಗೆಡಲೇ ಬಾರದು. ರೋಗಿ ವೈದ್ಯರ ಮೇಲೆ ಇಟ್ಟಿರುವ ವಿಶ್ವಾಸವನ್ನು ವೈದ್ಯರು ಉಳಿಸಿಕೊಳ್ಳಬೇಕು. ಅದುವೇ ವೈದ್ಯರ ಮೊದಲ ಆದ್ಯತೆಯಾಗಬೇಕು ಎಂದು ಖ್ಯಾತ ವೈದ್ಯ ಡಾ|| ಗಣಪತಿಭಟ್ ಮುಳ್ಳಂಕೊಚ್ಚಿ ನುಡಿದರು. ತಮ್ಮ ಸೇವೆಯನ್ನು ಗುರುತಿಸಿ ಗೌರವಿಸಿ ಎಲ್ಲಾ ಹವ್ಯಕ ಭಾಂದವರು, ಸಮಾಜ ಬಾಂಧವರು ಮತ್ತು ಸಂಘ ಸಂಸ್ಥೆಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದು ಅವರು ನುಡಿದರು.

 

ದಿನಾಂಕ 05-02-2023ನೇ ಭಾನುವಾರದಂದು ನಗರದ ನಂತೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಯೋಗ ದಂತ ತಪಾಸಣೆ, ಬಾಯಿ ಕ್ಯಾನ್ಸರ್ ತಪಾಸಣೆ ಶಿಬಿರ, ಆಯುರ್ವೇದ ಮತ್ತು ಎಲುಬು ತಪಾಸಣಾ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

 

ಮಂಗಳೂರು ಹವ್ಯಕ ಮಂಡಲ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಮಂಗಳೂರು ಹವ್ಯಕ ಮಹಾಸಭಾ, ಹವ್ಯಕ ಸಭಾ ಮಂಗಳೂರು, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ, ಶ್ರೀ ಭಾರತೀ ಸೌಹಾರ್ದ ಸಹಕಾರಿ ಸಂಸ್ಥೆ, ಶ್ರೀ ಶ್ರದ್ಧಾನಂದ ಸರಸ್ವತಿ ವಿದ್ಯಾಲಯ, ವೆನ್‍ಲಾಕ್ ಆಸ್ಪತ್ರೆ ಮತ್ತು ಶ್ರೀ ಭಾರತೀ ವಿದ್ಯಾಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಈ ಶಿಬಿರ ಜರುಗಿತು. ಈ ಶಿಬಿರ ನಡೆಸುವಲ್ಲಿ ಮಂಗಳೂರು ನರ್ಸಿಂಗ್ ಹೋಮ್, ಮಂಗಳಾ ಹಾಸ್ಪಿಟಲ್, ಭಟ್ ನರ್ಸಿಂಗ್ ಹೋಮ್, ವೇದಮಾಯು ಆಯುರ್ವೇದ ಆಸ್ಪತ್ರೆ, ಸ್ವರ್ಶ ಡಯಗ್ನೋಸ್ಟಿಕ್, ದೇಲಂಪಾಡಿ ಯೋಗ ಪ್ರತಿಷ್ಠಾನ, ವೆನ್‍ಲಾಕ್ ಆಸ್ಪತ್ರೆ, ನಿಟ್ಟೆ ಶಾಕ್ ಶ್ರವಣ.. ಮಹಾವಿದ್ಯಾಲಯ ಈ ಶಿಬಿರ ನಡೆಸಲು ಸಹಕಾರ ನೀಡಿದರು. ಇದೇ ಸಂದರ್ಭದಲ್ಲಿ ಹವ್ಯಕ ಸಮಾಜದ ಹಿರಿಯ ವೈದ್ಯರುಗಳಾದ ಡಾ|| ಗಣಪತಿ ಭಟ್ ಮುಳ್ಳಂಕೊಚ್ಚಿ (ಮಕ್ಕಳ ತಜ್ಞರು), ಡಾ|| ಸುಂದರ್ ಭಟ್, ಡಾ|| ಪಿ.ಎಸ್. ಭಟ್ (ಸೀನಿಯರ್ ಕಾರ್ಡಿಯಾಲಜಿಸ್ಟ್, ಫಾ.ಮುಲ್ಲರ್ಸ್ ಆಸ್ಪತ್ರೆ) , ಡಾ|| ಕೈಕಂಬ ಸುಂದರ ಭಟ್ (ಸ್ತ್ರೀ ರೋಗ ತಜ್ಞರು) ಪೋ. ಸುಂದರ್ ಭಟ್ (ಜನರಲ್ ಮೆಡಿಸಿನ್, ಹಾವು ಕಚ್ಚಿದರೆ ಮದ್ದು ಕೊಡುವುದರಲ್ಲಿ ತಜ್ಞರು), ಡಾ|| ಬಿ.ಆರ್. ಭಟ್ (ಮೆಡಿಕಲ್ ಆಫಿಸರ್) , ಡಾ|| ಲತಾ ಶರ್ಮ(ಒ.ಬೀ.ಜಿ) , ಡಾ|| ಜೆ.ಕೆ. ಭಟ್ ಶಂಕಬಿತ್ತಿಲು (ಆಕ್ಟಿವ್ ಅಸೋಸಿಯೇಶನ್ ಲೀಡರ್), ಡಾ|| ನರಸಿಂಹ ಹೆಗ್ಡೆ (ಕಾರ್ಡಿಯಾಲಜಿಸ್ಟ್), ಡಾ|| ಕುಮಾರಸ್ವಾಮಿ ಉಪ್ಪಂಗಳ (Consultant of MCF and KIOCL),,  ಡಾ|| ಗೋವಿಂದರಾಜ್ (ಪ್ರತಿಭಾ ಐ ಆಸ್ಪತ್ರೆ), ಇವರುಗಳನ್ನು ಹೂ ಹಾರ, ಫಲಪುಷ್ಪ ನೀಡಿ ಗೌರವಿಸಲಾಯಿತು.

 

ಹವ್ಯಕ ಸಭಾ ಮಂಗಳೂರು ಇದರ ಅಧ್ಯಕ್ಷರಾದ ಡಾ|| ರಾಜೇಂದ್ರ ಪ್ರಸಾದ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಡಾ|| ಮುರಲೀ ಮೋಹನ್ ಚೂಂತಾರು ವಂದನಾರ್ಪಣೆ ಮಾಡಿದರು. ಸುಮಾರು 205 ಮಂದಿ ಈ ವೈದ್ಯಕೀಯ ಶಿಬಿರದ ಪ್ರಾಯೋಜನ ಪಡೆದರು. 20 ಮಂದಿ ರಕ್ತದಾನ ಮಾಡಿದರು. 120 ಮಂದಿಗೆ ಎಲುಬಿನ ಸಾಂದ್ರತೆ ತಪಾಸಣೆ ಮಾಡಲಾಯಿತು.

 

ಈ ಶಿಬಿರದಲ್ಲಿ ಮಕ್ಕಳ ತಜ್ಞರು, ಎಲುಬು ತಜ್ಞರು, ಜನರಲ್ ಸರ್ಜರಿ ವೈದ್ಯರು, ಪಿಸಿಷಿಯನ್ ವೈದ್ಯರು, ಚರ್ಮ ರೋಗ ತಜ್ಞರು, ಮಕ್ಕಳ ಸರ್ಜರಿ ತಜ್ಞರು, ಕಿವಿ ಮೂಗು ತಜ್ಞರು, ದಂತ ವೈದ್ಯರು, ಆಯುರ್ವೇದ ವೈದ್ಯರು, ಸ್ತ್ರೀ ರೋಗ ತಜ್ಞರು, ಕಣ್ಣಿನ ತಜ್ಞರು, ಬಾಯಿ ಮುಖ ದವಡೆ ತಜ್ಞರು ಭಾಗವಹಿಸಿದ್ದರು.

ಈ ಶಿಬಿರ ನಡೆಸಲು ಡಾ|| ಗೌತಮ್ ಕುಳಮರ್ವ (ENT), , ಡಾ|| ಲತಾ ಶರ್ಮ, ಡಾ|| ಹರಿಶ್ಚಂದ್ರ, ಡಾ|| ಮುರಲೀ ಕೇಶವ (ಮಕ್ಕಳ ತಜ್ಞರು), ಡಾ|| ಸದಾಶಿವ ರಾವ್ (ಮಕ್ಕಳ ಶಸ್ತ್ರ ಚಿಕಿತ್ಸೆ ತಜ್ಞರು), ಪ್ರೋ. ಹರೀಶ್ಚಂದ್ರ ಬಡೆಕ್ಕಿಲ (ಜನರಲ್ ಸರ್ಜನ್), ಡಾ|| ಗಣಪತಿ ಭಟ್ ಮುಳ್ಳಂಕೊಚ್ಚಿ, ಡಾ|| ಈಶ್ವರ ಪಳ್ಳಾದೆ, ಡಾ|| ಕಿಶನ್ ರಾವ್ ಬಾಳಿಲ (ಜನರಲ್ ಸರ್ಜನ್), ಡಾ|| ಶರಣ್ಯ (ಡೆಂಟಲ್ ಸರ್ಜನ್), ಡಾ|| ಗೋಪಾಲಕೃಷ್ಣ ದೇಲಂಪಾಡಿ (ಯೋಗ ತಜ್ಞರು), ಡಾ|| ಚಾಂದಿನಿ, ಡಾ|| ರಾಜಶ್ರೀ ಮೋಹನ್, ಡಾ|| ಕೇಶವ ರಾಜ್ (ಆಯುರ್ವೇದ ತಜ್ಞರು), ಡಾ|| ಕೆ.ಕೆ ಕಂಡಿಗೆ (ಕಣ್ಣಿನ ತಜ್ಞರು), ಡಾ|| ಭವ್ಯ, ಡಾ

|| ಶ್ರೀರಕ್ಷಾ, ಡಾ|| ಗಣೇಶ್ ಭಟ್ (ಡೆಂಟಲ್), ಡಾ|| ಸೌರಭ್, ಡಾ|| ಗಿರೀಶ್ ಮುಂತಾದವರು ಸಹಕರಿಸಿದರು. ಸಭೆಯ ಅಧ್ಯಕ್ಷತೆಯನ್ನು ದ.ಕ ಮತ್ತು ಕಾಸರಗೋಡು ಹವ್ಯಕ ಮಹಾಸಭದ ಅಧ್ಯಕ್ಷರಾದ ಶ್ರೀ ನಿಡುಗಳ ಕೃಷ್ಣಭಟ್ ವಹಿಸಿದ್ದರು. ಹವ್ಯಕ ಮಂಡಲದ ಗಣೇಶ್ ಕಾಶಿಮಠ, ಶ್ರೀ ಭಾರತೀ ಸೌಹಾರ್ದ ಬ್ಯಾಂಕಿನ ಉಪಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಭಟ್, ಸರೋಜಿನಿ ಪ್ರತಿಷ್ಠಾನದ ಶ್ರೀ ಗಣೇಶ್ ಸುಂದರ್, ಶ್ರೀ ಕೃಷ್ಣ ನೀರಮೂಲೆ, ಶ್ರೀಮತಿ ಲಕ್ಷ್ಮೀ ರಾಜೇಂದ್ರ ಪ್ರಸಾದ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Highslide for Wordpress Plugin