ದಾನಗಳಲ್ಲಿ ಅತೀ ಶ್ರೇಷ್ಠವಾದ ದಾನ ಎಂದರೆ ರಕ್ತದಾನ.

ನಂತೂರು, ನ.28 : ದಾನಗಳಲ್ಲಿ ಅತೀ ಶ್ರೇಷ್ಠವಾದ ದಾನ ಎಂದರೆ ರಕ್ತದಾನ. ನೀವು ಸಕಾಲದಲ್ಲಿ ಮಾಡುವ ರಕ್ತದಾನದಿಂದ ನಾಲ್ಕು ಜೀವ ಉಳಿಸಬಹುದು. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ರಕ್ತದಾನದಿಂದ ನಿಮಗೆ ದೊರಕುವ ಸಾರ್ಥಕತೆ ಇನ್ನಾವುದೇ ದಾನದಿಂದ ಸಿಗಲಾರದು. ನಿರಂತರವಾಗಿ ರಕ್ತದಾನ ಮಾಡುವುದರಿಂದ ಅಧಿಕ ರಕ್ತದೊತ್ತಡ, ಹೃದಯದ ಕಾಯಿಲೆ ಬರುವ ಸಾಧ್ಯತೆ ಕ್ಷೀಣಿಸುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತದ ಕೊರತೆ ನೀಗಿಸಬಹುದು ಎಂದು ಡಾ. ಸಂಪತ್ತಿಲ ಮಹಾಲಿಂಗ ಶರ್ಮ ಅಭಿಪ್ರಾಯ ಪಟ್ಟರು.

ದೀಪ ಬೆಳಗಿಸುವುದರ ಮೂಲಕ ರಕ್ತದಾನ ಶಿಬಿರಕ್ಕೆ ಡಾ. ಎಸ್.ಎಮ್ ಶರ್ಮ ಚಾಲನೆ ನೀಡಿದರು.

ದಿನಾಂಕ 28-11-2021ನೇ ಭಾನುವಾರದಂದು, ನಗರ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜು ಇಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮತ್ತು ಮಂಗಳೂರು ಹವ್ಯಕ ಸಭಾ ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು. ವೆನ್‌ಲಾಕ್ ಆಸ್ಪತ್ರೆ, ರಕ್ತನಿಧಿ ಇದರ ವೈದ್ಯರುಗಳು ಮತ್ತು ತಂತ್ರಜ್ಞರು ಈ ಶಿಬಿರವನ್ನು ನಡೆಸಿಕೊಟ್ಟರು. ಹವ್ಯಕ ಸಭಾ ಮಂಗಳೂರು ಇದರ ಶ್ರೀ ಗಣೇಶಮೋಹನ ಕಾಶಿಮಠ, ಶ್ರೀಮತಿ ಅನಿತಾ ಬೋಳಂತಕೋಡಿ, ವೆನ್‌ಲಾಕ್ ಆಸ್ಪತ್ರೆಯ ಡಾ. ವಾಗೀಶ್, ಚೂಂತಾರು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು, ವೆನ್‌ಲಾಕ್ ರಕ್ತನಿಧಿಯ ಮೇಲ್ವಿಚಾರಕರಾದ ಆಂತೋನಿ, ಅಶೋಕ್, ಗಣೇಶ್ ಸುಂದರ್, ಗಣೇಶ್ ಭಟ್, ಮುಂತಾದವರು ಉಪಸ್ಥಿತರಿದ್ದರು. ಭಾರತೀ ಕಾಲೇಜಿನ ಕಾರ್ಯದರ್ಶಿ ಶ್ರೀ ಕೃಷ್ಣ ನೀರಮೂಲೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಸುಮಾರು 20 ಮಂದಿ ಈ ಶಿಬಿರದಲ್ಲಿ ರಕ್ತದಾನ ಮಾಡಿದರು.
ರಕ್ತದಾನ ಶಿಬಿರದಲ್ಲಿ ಶ್ರೀ ಭಾರತೀ ಸಮೂಹ ಸಂಸ್ಥೆಯ ಸ್ಕೌಟ್ ಗೈಡ್ ರೋವರ್ ರೆಂಜರ್ ಮತ್ತು ಸ್ಕೌಟರ್ ಪ್ರತಿಮ ಕುಮಾರ್ ಕೆ.ಎಸ್. ಭಾಗವಹಿಸಿದ್ದರು.

Highslide for Wordpress Plugin