’ಯಶಸ್ಸು ನಮ್ಮ ಕೈಯಲ್ಲಿದೆ’ ಎಂಬ ತತ್ವದ ಮೇಲೆ ಕಾಲೇಜು ವಿದ್ಯಾರ್ಥಿಗಳನ್ನು ರೂಪಗೊಳಿಸುವಿಕೆ ಮೂಲಕ ’ಉದ್ಯೋಗ ಸಂದರ್ಶನ ತಯಾರಿ’ ವಿಚಾರವಾಗಿ ಕಾರ್ಯಾಗಾರವನ್ನು ’ವಿಜಯ ಕರ್ನಾಟಕ’ ತಂಡದ ಪ್ರತಿನಿಧಿ ಶ್ರೀ ಹರ್ಷಿತ್ ಗೌಡ ನಡೆಸಿಕೊಟ್ಟರು. ಅವರು ಸಂದರ್ಶನದಲ್ಲಿ ವ್ಯಕ್ತಿತ್ವ ವಿಕಸನದ ಪ್ರಮುಖ ಅಂಗಗಳಾದ ನೋಟ, ನಡವಳಿಕೆ, ಸಂವಹನ ಇವುಗಳ ಪ್ರಾಮುಖ್ಯತೆಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಈಶ್ವರ ಪ್ರಸಾದ್ ಪ್ರಸ್ತಾವನೆಗೈದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಇದೇ ಕಾರ್ಯಕ್ರಮದ ಕೊನೆಯ ಹಂತದಲ್ಲಿ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಯಿತು. ಕಾರ್ಯಾಗಾರದಲ್ಲಿ ವಿಜೇತರಾದ ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಕು. ಬಿ.ಕೆ. ಸುಶ್ಮಿತಾ ಇವರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಜಿಲೆಟ್ ಕಂಪನಿಯ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ರೇಜರನ್ನು ಉಚಿತವಾಗಿ ವಿತರಿಸಿ, ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪದವಿ ಪೂ. ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಭಟ್, ಪದವಿ, ಹಾಗೂ ಪದವಿ ಪೂರ್ವ ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಾಣಿಜ್ಯ ಉಪನ್ಯಾಸಕರಾದ ಶ್ರೀ ಅಶೋಕ್ ಅತಿಥಿಗಳನ್ನು ಸ್ವಾಗತಿಸಿ, ಗ್ರಂಥಪಾಲಕಿ ಶ್ರೀಮತಿ ಜಯಂತಿ ವಂದನಾರ್ಪಣೆಗೈದರು.