ಶ್ರೀ ಭಾರತೀ ಸಮೂಹ ಸಂಸ್ಥೆ ವಾರ್ಷಿಕ ಕ್ರೀಡೋತ್ಸವ 2017-18

ಶಿಸ್ತು ಬದ್ಧ ಕ್ರೀಡೆ ವಿದ್ಯಾರ್ಥಿಗಳ ದೈಹಿಕ ಮಾನಸಿಕ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಗೆಲ್ಲುವುದಕ್ಕಾಗಿ ಆಡಬೇಕು ಆದರೆ ಸೋಲಬಾರದೆಂದು ಆಟ ವಾಡಬಾರದು. ಕ್ರೀಡೆಯಿಂದ ಸಂತೋಷವನ್ನು, ಮನೋರಂಜನೆಯನ್ನು, ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಶ್ರೀ ಭಾರತೀ ಸಮೂಹ ಸಂಸ್ಥೆಯ ವಾರ್ಷಿಕ ಕ್ರೀಡಾ ಕೂಟದ ಮೂಖ್ಯ ಅತಿಥಿಯಾಗಿ ಆಗಮಿಸಿದ ಕಾಸರಗೋಡಿನ ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿಗಳಾದ ಡಾ. ರವಿಭಟ್ ರವರು ವಿದ್ಯಾರ್ಥಿಗಳನುದ್ದೇಶಿಸಿ ನುಡಿದರು.

ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪಾಠಗಳ ಜೊತೆಗೆ ಆಟಗಳು ಮುಖ್ಯ ಕ್ರೀಡೆಗಳಲ್ಲಿರುವ ಪ್ರತಿಭೆಗಳು ಹೊರಹೊಮ್ಮಲು ವಾರ್ಷಿಕ ಕ್ರೀಡಾಕೂಟಗಳು ಮುಖ್ಯ ಪಾತ್ರವಹಿಸುತ್ತದೆ ಎಂದು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ ರಾಜೇಂದ್ರ ಪ್ರಸಾದ್ ಅಧ್ಯಕ್ಷೀಯ ನುಡಿಯನ್ನು ನುಡಿದರು.


ಕಾರ್ಯಕ್ರಮದಲ್ಲಿ ಸ್ವಾಮಿ ಸದಾನಂದ ಸರಸ್ವತಿ ವಿದ್ಯಾಲಯದ ಮೂಖ್ಯೋಪಾಧ್ಯಾಯರಾದ ಶ್ರೀ ಗುರುರಾಜ್ ಭಟ್, ಆಡಳಿತ ಮಂಡಳಿಯ ಉಪಾದ್ಯಕ್ಷರಾದ ಎಂ ಪಿ ಭಟ್ , ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಶ್ರೀ ರಾಮಚಮದ್ರ ಭಟ್ ಮತ್ತು ಸುರೇಶ್ ಶೈಣೈ ಮೊದಲಾದವರು ಉಪಸ್ಥಿತರಿದ್ದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ವಿದ್ಯಾಭಟ್ ಸ್ವಾಗತಿಸಿ ಪದವಿ ಕಾಲೇಜಿನ ಪ್ರಾಂಶುಪಾಲಾರಾದ ಡಾ. ಈಶ್ವರ ಪ್ರಸಾದ್ ವಂದಿಸಿದರು. ಉಪನ್ಯಾಸಕರಾದ ಶ್ರೀ ಸೂರ್ಯನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು.

ಪಥಸಂಚಲನ ಧ್ವಜಾರೋಹಣ ವಿವಿಧ ಆಟೋಟ ಸ್ಪರ್ಧೆಗಳು ಏರ್ಪಟ್ಟವು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಪದುವ ಪದವಿ ಪೂರ್ವ ಕಾಲೇಜಿನ ಪ್ರಾಂಶು ಪಾಲೆಯಾದ ಶ್ರೀಮತಿ ಗ್ಲಾಡಿಸ್ ಆಲೋಶಿಯಸ್ ಮುಖ್ಯ ಅತಿಥಿಯಾಗಿ ಆಗಮಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

Highslide for Wordpress Plugin