Video Player
00:00
00:00
ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಕುಂಬ್ಳೇಕರ್ ಮೋಹನ್ ಕುಮಾರ್ ಅವರು ಯೋಗಾಸನ ನಮ್ಮಸಂಸ್ಕೃತಿಯ ಒಂದು ಭಾಗ, ವಿದ್ಯಾರ್ಥಿಗಳು ತಮ್ಮ ಹೆತ್ತವರೊಂದಿಗೆ ಸೇರಿ ಯೋಗಾಭ್ಯಾಸವನ್ನು ಮಾಡುವುದರೊಂದಿಗೆ ಅದನ್ನು ತಮ್ಮ ದಿನಚರಿಯಾಗಿಸಿಕೊಳ್ಳಬೇಕು ಎಂದರು.
ನಂತರ ವಿವಿಧ ರೀತಿಯ ಯೋಗಾಸನ ಮತ್ತು ಮುದ್ರೆಗಳನ್ನು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಿದರು.
ಪ್ರಾಂಶುಪಾಲೆ ಗಂಗಾರತ್ನ ಶುಭಾಶಂಸನೆ ಗೈದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಪ್ರತಿಮ್‌ಕುಮಾರ್ ಸ್ವಾಗತಿಸಿ ಉಪನ್ಯಾಸಕಿ ರಶ್ಮಿ ವಂದಿಸಿದರು.