ಪರಂಪರಾ- ಸಾಂಪ್ರದಾಯಿಕ ದಿನಾಚರಣೆ
ತಾ 03.08.2022 ರಂದು ಶ್ರೀ ಭಾರತೀ ಕಾಲೇಜು ನಂತೂರು ಮಂಗಳೂರು ಇಲ್ಲಿ “ಪರಂಪರಾ” ಸಾಂಪ್ರದಾಯಿಕ ದಿನಾಚರಣೆಯು ಬಹಳ ಅರ್ಥಪೂರ್ಣವಾಗಿ ಜರಗಿತು.
ಕಾರ್ಯಕ್ರಮದ ಅತಿಥಿಗಳಾಗಿ ಶ್ರೀಯುತ ಗಜಾನನ ಪೈ ತೋನ್ಸೆ ಇವರು ಭಾಗವಹಿಸಿದ್ದರು. ಕಾಲೇಜಿನಾ ಪ್ರಾಂಶುಪಾಲರಾದ ಶ್ರೀಯುತ ಜೀವನ್ ದಾಸ್ ಎ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರೊಂದಿಗೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಶಾಂತ್ ಕೃಷ್ಣ ಗಾಂವ್ಕರ್ ಹಾಗೂ ಉಪಾಧ್ಯಕ್ಷರಾದ ಗಣಪತಿ ಹೆಗಡೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಸಾಕ್ಷಿ ಇವರು ಪ್ರಾರ್ಥನೆಗೈದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿ ವೇದಪ್ರಕಾಶ್ ಆಗಮಿಸಿದಂತಹ ಅತಿಥಿಗಳನ್ನು ಸ್ವಾಗತಿಸಿದರು. ನಂತರ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಆರಂಭಿಸಲಾಯಿತು. ಅಥಿತಿಗಳಾದ ಶ್ರೀಯುತ ಗಜಾನನ ತೋನ್ಸೆ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಅತ್ಯುತ್ತಮವಾದ ಮಾತುಗಳನ್ನು ಆಡಿದರು. ವಿದ್ಯಾರ್ಥಿಗಳನ್ನು ಅಭಿನಂದಿಸುದರೊಂದಿಗೆ ಈ ಕಾರ್ಯಕ್ರಮ ಕೇವಲ ಒಂದೇ ದಿವಸಕ್ಕೆ ಸೀಮಿತವಾಗಿರದೆ ಪ್ರತಿದಿವಸ ಭಾರತೀಯ ಸಂಸ್ಕೃತಿಯನ್ನು ಸಂಸ್ಕಾರವನ್ನು ಎತ್ತಿ ಹಿಡಿಯಬೇಕು ಎಂದು ಬಹಳ ಉತ್ತಮವಾಗಿ ವಿವರಿಸಿದರು. ನಂತರ ಅಧ್ಯಕ್ಷೀಯ ಮಾತುಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೀವನ್ ದಾಸ್ ಎ ಇವರು ವಿದ್ಯಾರ್ಥಿಗಳಿಗೆ ತಾಳ್ಮೆಯು ಅತ್ಯಂತ ಮುಖ್ಯವಾದದ್ದು ಯಾವ ವಿದ್ಯಾರ್ಥಿ ತಾಳ್ಮೆಯನ್ನು ಜೀವನದಲ್ಲಿ ರೂಡಿಸಿಕೊಳ್ಳುತ್ತಾನೋ ಅವನು ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾನೆ ಎಂದರು. ಕೊನೆಯಲ್ಲಿ ದ್ವಿತೀಯ ಬಿ.ಸಿ. ಎ ವಿದ್ಯಾರ್ಥಿ ಗುರುಕಿರಣ್ ಧನ್ಯವಾದ ಸಮರ್ಪಿಸಿದರು. ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಅಖಿಲ ಕಾರ್ಯಕ್ರಮವನ್ನು ನಿರೂಪಿಸಿದರು.
ಕೊನೆಯಲ್ಲಿ ಶಾಂತಿಮಂತ್ರದೊಂದಿಗೆ ಸಭಾಕಾರ್ಯಕ್ರ ಮುಕ್ತಾಯವಾಯಿತು.
ನಂತರ ಸಾಂಪ್ರದಾಯಿಕ ರಾಜ, ರಾಣಿ ಸ್ಪರ್ಧೆ ನೆರವೇರಿತು. ಇದರ ಪರೀಕ್ಷಕರಾಗಿ ಸಂಸೃತ ಶಿಕ್ಷಕರಾದ ಸಂಜಯ್, ಆಂಗ್ಲಭಾಷಾ ಶಿಕ್ಷಕಿಯಾದ ಶ್ರೀಮತಿ ರಶ್ಮಿ ಹಾಗೂ ಅರ್ಥಶಾಸ್ರ ಶಿಕ್ಷಕರಾದ ಕುಮಾರಿ ಭಾರತಿ ಇವರು ಭಾಗವಹಿಸಿದರು. ತೃತೀಯ ಬಿ.ಕಾಂ ವಿದ್ಯಾರ್ಥಿ ಪ್ರಶಾಂತ್ ಕೃಷ್ಣ ಗಾಂವ್ಕರ್ ಸಾಂಪ್ರದಾಯಿಕ ರಾಜನಾಗಿ, ತೃತೀಯ ಬಿ.ಕಾಂ ವಿದ್ಯಾರ್ಥಿನಿ ಆಶಿತಾ ಸಾಂಪ್ರದಾಯಿಕಾ ರಾಣಿಯಾಗಿ ಆಯ್ಕೆಯಾದರು.
ನಂತರ ಅಪರಾಹ್ನ ಗಂ.1:30ಕ್ಕೆ ವಿಶಿಷ್ಥ ರೀತಿಯಲ್ಲಿ ಬಾಳೆಎಲೆ ಭೋಜನವನ್ನು ಏರ್ಪಡಿಸಿದ್ದರು. ಭೋಜನದ ನಂತರ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳಿಗಾಗಿ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಈ ಕಾರ್ಯಕ್ರಮವನ್ನು ಆನಂದಿಸಿದರು.