ಪದವಿ ಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಸ್ವಚ್ಛ ಗೆಳತಿ ಕಾರ್ಯಕ್ರಮ

ದಿನಾಂಕ 08.03.2022ರಂದು ಶ್ರೀ ಭಾರತೀ ಪದವಿ ಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಅಂತರಾಷ್ಟ್ರೀಯ ಮಹಿಳಾದಿನಾಚರಣೆಯ ಪ್ರಯುಕ್ತ ಸ್ವಚ್ಛಗೆಳತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಎ.ಜೆ ವೈದ್ಯಕೀಯ  ಆಸ್ಪತ್ರೆಯ ವೈದ್ಯಾಧಿಕಾರಿಯಾಗಿರುವ ಡಾ| ಪ್ರಿಯಾಂಕ ಅವರು ವಿದ್ಯಾರ್ಥಿನಿಯರಿಗೆ ಹದಿಹರೆಯದ ವಯಸ್ಸಿನ ಬದಲಾವಣೆ, ಋತುಚಕ್ರದ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ, ಸ್ಯಾನಿಟರಿ ನ್ಯಾಪ್ಕಿನಿನ ಆಯ್ಕೆ,  ಬಳಕೆ ಮತ್ತು ಅದರ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ನೀಡಿದರು. ಈ ಸಂದರ್ಭದಲ್ಲಿ ಇಲಾಖೆಯಿಂದ ಪಡೆಯಲಾದ “ಸ್ವಚ್ಛ ಗೆಳತಿ”-ಋತುಚಕ್ರ ಜಾಗ್ರತಿಯ ಕುರಿತಾದ ಕಿರು ಚಿತ್ರಗಳ ಸಿ.ಡಿಯನ್ನು ವಿದ್ಯಾರ್ಥಿನಿಯರಿಗೆ  ಪ್ರದರ್ಶಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಗಂಗಾರತ್ನ ಮತ್ತು ಬೋಧಕ-ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

 

Highslide for Wordpress Plugin