ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಡಳಿತ ಮಂಡಳಿ ಬದ್ಧ : ಡಾ. ಬಿ.ರಾಜೇಂದ್ರ ಪ್ರಸಾದ್
ನಂತೂರು, ಎ.10 : ಪೋಷಕರು ಯಾವುದೇ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರನ್ನು ಅಥವಾ ಆಡಳಿತ ಮಂಡಳಿಯವರನ್ನು ಸಂಪರ್ಕಿಸಿ, ಅನುಭವವನ್ನು ಹಂಚಿಕೊಳ್ಳಬಹುದು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲಕರವಾದ ಯಾವುದೇ ಸಲಹೆ ಸೂಚನೆಗಳನ್ನು ಅನುಷ್ಠಾನಿಸಲು ಆಡಳಿತ ಮಂಡಳಿ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜಿನ ಪ್ರಗತಿಗಾಗಿ ಅನೇಕ ಕ್ರಮಕೈಗೊಳ್ಳಲಾಗುತ್ತದೆ ಎಂದು ನಂತೂರು ಶ್ರೀ ಭಾರತೀ ಕಾಲೇಜು ಸೇವಾ ಸಮಿತಿ ಅಧ್ಯಕ್ಷ ಡಾ.ರಾಜೇಂದ್ರಪ್ರಸಾದ್ ತಿಳಿಸಿದರು.
ಅವರು ಸೋಮವಾರ ಮಂಗಳೂರು ನಂತೂರು ಪದವು ಶ್ರೀ ಭಾರತೀ ಪದವಿ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ವಿನಯ ಭಾರದ್ವಾಜ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಕಾಲೇಜಿನ ಹಿತರಕ್ಷಣೆ, ವಿದ್ಯಾರ್ಥಿಗಳ ಶಿಸ್ತು, ಹೆತ್ತವರ ಭಾಗವಹಿಸುವಿಕೆ ಅತೀ ಅವಶ್ಯ. ವಿದ್ಯಾರ್ಥಿಗಳ ಕಲಿಕಾಗತಿಯನ್ನು ಪರಿಶೀಲಿಸುತ್ತಿರಬೇಕು ಮತ್ತು ಅದಕ್ಕಾಗಿ ಕಾಲೇಜಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾಲೇಜು ಸೇವಾ ಸಮಿತಿ ಉಪಾಧ್ಯಕ್ಷ ಶ್ರೀ ಗಣೇಶ ಮೋಹನ ಕಾಶಿಮಠ, ಉಪಾಧ್ಯಕ್ಷ ಶ್ರೀ ಎಂ.ಟಿ.ಭಟ್, ಶಿಕ್ಷಕ ರಕ್ಷಕ ಸಂಘದ ಸಂಯೋಜಕಿ ಶಾಲೆಟ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಡಾ.ಈಶ್ವರ ಪ್ರಸಾದ್ ಆಲಂಗಾರು ಪ್ರಥಮ ಸೆಮಿಸ್ಟರ್‌ಗಿಂತ ಎರಡನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಫಲಿತಾಂಶ ಪ್ರಗತಿ ಸಾದಿಸಿದೆ ಎಂದರು. ಉಪನ್ಯಾಸಕಿ ವೀಕ್ಷಿತಾ ಸ್ವಾಗತಿಸಿ, ಉಪನ್ಯಾಸಕಿ ವಾಣಿ ವಂದಿಸಿದರು. ಉಪನ್ಯಾಸಕಿ ಗಂಗಾರತ್ನ ಮುಗುಳಿ ಕಾರ್ಯಕ್ರಮ ನಿರ್ವಹಿಸಿದರು.