ಜೀವನ ಕೌಶಲ್ಯದ ಕುರಿತು ಒಂದು ದಿನದ ಕಾರ್ಯಾಗಾರ

ಮಂಗಳೂರು ನಂತೂರು ಶ್ರೀ ಪದವಿ ಕಾಲೇಜು ಮತ್ತು ಆಕಾಂಕ್ಷಾ ಚಾರಿಟೇಬಲ್‌ ಟ್ರಸ್ಟ್‌(ರಿ), ಪುತ್ತೂರು, ಇಂಪ್ಯಾಕ್ಟ್‌30 ದ.ಕ ಇವುಗಳ ಸಹಯೋಗದಲ್ಲಿ ದಿನಾಂಕ 06.03.2021ರಂದು ಜೀವನ ಕೌಶಲ್ಯದ ಕುರಿತು ಒಂದು ದಿನದ ಕಾರ್ಯಾಗಾರ ಶ್ರೀ ಭಾರತೀ ಸಮೂಹ ಸಂಸ್ಥೆಯ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಆಕಾಂಕ್ಷಾ ಚಾರಿಟೇಬಲ್‌ ಟ್ರಸ್ಟ್ನ ಶ್ರೀ ಶ್ರೀಶ ಭಟ್‌, ಮ್ಯಾನೇಜಿಂಗ್‌ ಡೈರೆಕ್ಟರ್‌, ಆಕಾಂಕ್ಷಾ ಚಾರಿಟೇಬಲ್‌ ಟ್ರಸ್ಟ್‌(ರಿ), ಪುತ್ತೂರು, ಅವರು ಮಾತನಾಡಿ, ವಿದ್ಯಾರ್ಥಿಗಳು ವಿವಿಧ ರೀತಿಯ ಕೌಶಲ್ಯಗಳನ್ನು ರೂಢಿಸಿಕೊಂಡರೆ ಉದ್ಯೋಗ ಕ್ಷೇತ್ರದಲ್ಲಿ ಅವರಿಗೆ ಒಳ್ಳೆಯ ಅವಕಾಶಗಳಿರುತ್ತವೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜೀವನ್‌ದಾಸ್‌ ಅವರು, ಪರಿವರ್ತನೆ ನಿತ್ಯನೂತನವಾದುದು, ತಮ್ಮ ಜೀವನದಲ್ಲಿ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಅಳವಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು, ಇದಕ್ಕೆ ಆಕಾಂಕ್ಷಾ ಚಾರಿಟೇಬಲ್‌ ಟ್ರಸ್ಟ್‌ನ ವಿವಿಧ ಕಾರ್ಯಕ್ರಮಗಳು ಸಹಕಾರಿಗಳಾಗಿವೆ ಎಂದರು.
ಈ ಕಾರ್ಯಾಗಾರದಲ್ಲಿ ಜೀವನ ಕೌಶಲ್ಯಗಳಿಗೆ ಸಂಬಂಧಿಸಿದ ವಿವಿಧ ಗೋಷ್ಠಿಗಳು ಮತ್ತು ಚಟುವಟಿಕೆಗಳು ನಡೆದವು. ಇಂಪ್ಯಾಕ್ಟ್‌30ರ ಸದಸ್ಯರಾಗಿರುವ ಶ್ರೀ ಭಾರತೀ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ಕಾಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಾಲೇಜಿನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

Highslide for Wordpress Plugin