ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಯೋಗ ಸಹಕಾರಿ – ದೇಲಂಪಾಡಿ ಗೋಪಾಲಕೃಷ್ಣ ಭಟ್

ಮಂಗಳೂರಿನ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ೧೩.೦೮.೨೦೧೨ನೇ ತಾರೀಕಿನಂದು ಯೋಗ ತರಗತಿಗಳನ್ನು ಆರಂಭಿಸುತ್ತಾ ಖ್ಯಾತ ಯೋಗಪಟುಗಳಾದ ದೇಲಂಪಾಡಿ ಗೋಪಾಲಕೃಷ್ಣ ಭಟ್ ಇವರು ಯಮನಿಯಮಾಸನ ಪ್ರಾಣಾಯಾಮಪ್ರತ್ಯಾಹಾರವೇ ಮೊದಲಾದ ಅಷ್ಟಾಂಗಗಳ ಅನುಷ್ಠಾನದಿಂದ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಮತ್ತು ಇದರ ಮೂಲಕ ಆತ್ಮಸಾಕ್ಷಾತ್ಕಾರ ಸಾಧ್ಯ ಎಂದರು. ಅವರು ಯೋಗ ಪ್ರಾತ್ಯಕ್ಷಿಕೆಯ ಮೂಲಕ ಯೋಗಾಭ್ಯಾಸದ ಮಹತ್ವವನ್ನು ವಿವರಿಸಿದರು.

ಶ್ರೀ ಭಾರತೀ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎನ್. ಭಟ್‌ರವರು ಅತಿಥಿಗಳನ್ನು ಸ್ವಾಗತಿಸುತ್ತಾ ಯೋಗಾಭ್ಯಾಸವು ವಿದ್ಯಾರ್ಥಿಗಳ ಕಲಿಯುವಿಕೆಗೆ ಪೂರಕವಾಗಿದ್ದು ಇದರಿಂದ ಮನಸ್ಸಿನ ಏಕಾಗ್ರತೆಗೆ ಸಹಾಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕೆ.ಎಸ್.ಭಟ್ ವಹಿಸಿದ್ದರು. ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಮತ್ತು ಸಂಚಾಲಕರಾದ ಶ್ರೀ ವೈ.ವಿ.ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವು ಕುಮಾರಿ ಹೇಮಲತಾ ಮತ್ತು ಕುಮಾರಿ ಪ್ರಿಯಾ ಇವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕುಮಾರಿ ನವ್ಯಾ ವಂದಿಸಿದರು. ಡಾ. ಈಶ್ವರ ಪ್ರಸಾದ ಇವರು ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin