ವ್ಯಾಸವಿರಚಿತ ಶ್ರೀಮನ್ಮಹಾಭಾರತಮ್ ವಿಚಾರಗೋಷ್ಠಿ

ಮಂಗಳೂರಿನ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ದಶಮಾನೋತ್ಸವ ವಿಶೇಷ ಕಾರ್ಯಕ್ರಮದ ಅಂಗವಾಗಿ ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರದ ಅಧೀನದಲ್ಲಿ ದಿನಾಂಕ ೧೫.೧೨.೨೦೧೨ ಮಧ್ಯಾಹ್ನ ೨.೦೦ಗಂಟೆಯಿಂದ ೫.೦೦ ಗಂಟೆಯವರೆಗೆ ಮತ್ತು ೧೬.೧೨.೨೦೧೨ರಂದು ಬೆಳಗ್ಗೆ ೯.೦೦ ಗಂಟೆಯಿಂದ ಸಂಜೆ ೫.೦೦ ಗಂಟೆಯವರೆಗೆ ವ್ಯಾಸವಿರಚಿತ ಶ್ರೀಮನ್ಮಹಾಭಾರತಮ್ ವಿಚಾರಗೋಷ್ಠಿಯು ನಡೆಯಿತು. ಈ ಗೋಷ್ಠಿಯ ದೀಪಜ್ವಾಲನೆಯನ್ನು ಕೊಲ್ಲರಮಜಲು ಶ್ರೀ ಕೇಶವ ಭಟ್ಟರು ನೆರವೇರಿಸಿದರು.

ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ಟರು ವ್ಯಾಸವಿರಚಿತ ಮಹಾಭಾರತದ ಕಾಲ, ದೇಶ, ಗ್ರಂಥಗಳ ಪರಿಚಯವನ್ನು ನೀಡಿದರು. ಡಾ. ಶಂಕರ ಭಟ್ ಕುಮಟಾ ಇವರು ಮಹಾಭಾರತದಲ್ಲಿ ನಿರೂಪಿತ ರಾಜನೀತಿಯ ಕುರಿತು ಸಮಗ್ರ ಚಿತ್ರಣವನ್ನು ನಮ್ಮ ಮುಂದಿಟ್ಟರು, ವಿದ್ವಾನ್ ಗ.ನ. ಭಟ್ ಮೈಸೂರು ಇವರು ಮಹಾಭಾರತದ ಪಾತ್ರಗಳು ಈ ವಿಷಯವಾಗಿ ಮಹಾಭಾರತ, ಯಕ್ಷಗಾನ ಮತ್ತು ಸಂಸ್ಕೃತ ಇವುಗಳಲ್ಲಿದ್ದ ಅನುಭವದ ಆಧಾರದ ಮೇಲೆ ಮಾತನಾಡಿದರು. ಡಾ. ಪ್ರಭಾಕರ ಜೋಷಿಯವರು ಮಹಾಭಾರತದ ಪರಂಪರೆ ಮತ್ತು ಪ್ರಭಾವ ಎಂಬ ವಿಚಾರದ ಕುರಿತು ವಿಮರ್ಶಾತ್ಮಕವಾಗಿ ಮಾತನಾಡಿದರು.

ಶ್ರೀ ಗೋಪಾಲಕೃಷ್ಣ ಶಾಸ್ತ್ರಿ ಮೂಡಂಬೈಲು ಇವರು ಮಹಾಭಾರತದ ಕಷ್ಟಕರ ಪ್ರಸಂಗಗಳು ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎನ್. ಭಟ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅತಿಥಿಗಳನ್ನು ಪರಿಚಯಿಸಿದರು.

Highslide for Wordpress Plugin