ಜೀವನದಲ್ಲಿ ಸಾಧನೆಗೆ ಸನಾತನ ಸಂಸ್ಕೃತಿ ಬಹಳ ಮುಖ್ಯ – ಶ್ರೀ ಶ್ರೀಪತಿ ಭಟ್ಟ ಮೂಡಬಿದ್ರೆ

ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ದಶಮಾನೋತ್ಸವ ವಿಶೇಷ ಕಾರ್ಯಕ್ರಮದ ಅಂಗವಾಗಿ ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರದ ಅಧೀನದಲ್ಲಿ ರಾಮಾಯಣ, ಮಹಾಭಾರತ, ಪುರಾಣ, ಧರ್ಮಶಾಸ್ತ್ರ ಮತ್ತು ವೇದಾಂತ ವಿಷಯಗಳ ಕುರಿತು ಐದು ಸರಣಿ ವಿಚಾರ ಗೋಷ್ಠಿಗಳ ಸಮಾರೋಪ ಸಮಾರಂಭವು ದಿನಾಂಕ 05-01-2013ರಂದು ನಡೆಯಿತು. ಇದರಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ನಮ್ಮ ಸನಾತನ ಸಂಸ್ಕೃತಿ ಬಹಳ ಮುಖ್ಯವಾದುದು, ಆದ್ದರಿಂದ  ಅದನ್ನು ಅನುಷ್ಠಿಸಬೇಕು ಎಂದು ಶ್ರೀ ಶ್ರೀಪತಿ ಭಟ್ಟ ಮೂಡಬಿದ್ರೆ ಇವರು ನುಡಿದರು.

ನಂತರ ನಡೆದ ವೇದಾಂತ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವಿದ್ವಾನ್ ರಾಮಚಂದ್ರ ಭಟ್ಟ ನಿರ್ದೇಶಕರು ವೇದವಿಜ್ಞಾನ ಗುರುಕುಲಮ್ ಬೆಂಗಳೂರು ಇವರು ಮಾತನಾಡುತ್ತಾ ವೇದಾಂತವೆಂಬುದು ವಿಶ್ವ ಧರ್ಮ. ವೇದಾಂತವು ಇಂದಿನ ದಿನಗಳಲ್ಲಿ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಯಾವ ರೀತಿ ಜನಮನ್ನಣೆ ಗಳಿಸುತ್ತಿದೆ ಎಂದು ವಿವರಿಸಿದರು. ವಿದ್ವಾನ್  ಕೃಷ್ಣಮೂರ್ತಿ ನಿಟಿಲಾಪುರ, ಅವರು ವೇದಾಂತ ದರ್ಶನಗಳ ಸಂಕ್ಷಿಪ್ತ ಪರಿಚಯವನ್ನು ಮಾಡಿದರು.

Highslide for Wordpress Plugin