ಯಾವುದೇ ಭೌಗೋಳಿಕ ಚೌಕಟ್ಟಿಗೆ ಒಳಗಾಗದೆ ಪರಿಶುದ್ಧವಾದ ಯಾವಾಗಲು ಬೆಳಗುತ್ತಿರುವ ಭಾಷೆ ಸಂಸ್ಕೃತ – ಪ್ರೊ. ಟಿ.ಎನ್. ಪ್ರಭಾಕರ್

ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ದಶಮಾನೋತ್ಸವ ವಿಶೇಷ ಕಾರ್ಯಕ್ರಮದ ಅಂಗವಾಗಿ ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರದ ಅಧೀನದಲ್ಲಿ ದಿನಾಂಕ ೨೨.೧೨.೨೦೧೨ ರಂದು ಮೂರನೆಯ ಗೋಷ್ಠಿ ಪುರಾಣ ಗೋಷ್ಠಿಯನ್ನು ಉದ್ಘಾಟಿಸಿ, ಯಾವುದೇ ಭೌಗೋಳಿಕ ಚೌಕಟ್ಟಿಗೆ ಒಳಗಾಗದೆ ಪರಿಶುದ್ಧವಾದ ಯಾವಾಗಲು ಬೆಳಗುತ್ತಿರುವ ಭಾಷೆ ಸಂಸ್ಕೃತ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರೊ.ಟಿ.ಎನ್.ಪ್ರಭಾಕರ್ ಅವರು ನುಡಿದರು.

ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರವು ಈ ರೀತಿಯ ಗೋಷ್ಠಿಯನ್ನು ಹಮ್ಮಿಕೊಂಡಿರುವುದಕ್ಕೆ ಅವರು ಅಭಿನಂದಿಸಿದರು. ವಿದ್ವಾನ್ ಬಿ.ಎಲ್.ನಾಗರಾಜ ಅವರು ಪುರಾಣಗಳ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡುತ್ತಾ ಪುರಾಣಗಳಲ್ಲಿ ಓಂ ಕಾರದ ನಾದ ಮೂರನೆಯ ಸ್ತರವನ್ನು ಮುಟ್ಟಿದಾಗ ನಮ್ಮ ದೇಹದ ಅಂಗಗಳ ನ್ಯೂನತೆಯನ್ನು ನಿವಾರಿಸಲು ಸಾಧ್ಯವೆಂದು ತಮ್ಮದೇ ಉದಾಹರಣೆ ನೀಡುವ ಮೂಲಕ ವಿವರಿಸಿದರು.

ವಿದ್ವಾನ್ ಹಿರಣ್ಯ ವೆಂಕಟೇಶ್ ಇವರು ಪುರಾಣಗಳಲ್ಲಿ ವ್ರತಗಳು, ಪೂಜೆಗಳು ಹಬ್ಬಗಳು ಎಂಬ ವಿಚಾರದ ಕುರಿತು ಪ್ರಬಂಧ ಮಂಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎನ್ ಭಟ್ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜು ಆಡಳಿತಮಂಡಳಿ ಕಾರ್ಯದರ್ಶಿ ವೈ.ವಿ. ಭಟ್ ಉಪಸ್ಥಿತರಿದ್ದರು.

Highslide for Wordpress Plugin