ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಎನ್.ಎಸ್.ಎಸ್. ಪ್ರಾಯೋಜಕತ್ವದಲ್ಲಿ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಖ್ಯಾತ ವೈದ್ಯರಾದ ಡಾ. ಭೀಮ್ ಭಟ್‌ರವರು ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆಗೆ ಚಾಲನೆಯಿತ್ತರು.
ನಗರದ ಹಲವಾರು ತಜ್ಞ ವೈದ್ಯರುಗಳು ಈ ಶಿಬಿರದಲ್ಲಿ ಪಾಲ್ಗೊಂಡು ನರ್ಸರಿಯಿಂದ ಪದವಿ ತರಗತಿಯವರೆಗಿನ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ನಡೆಸಿದರು. ಈ ಶಿಬಿರವು ಕಣ್ಣು, ಹಲ್ಲು, ಚರ್ಮದ ತಪಾಸಣೆ, ಹಾಗೂ ಇತರ ವೈದ್ಯಕೀಯ ತಪಾಸಣೆಗಳನ್ನೊಳಗೊಂಡಿತ್ತು. ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡರು.
‘ವಾಸನ್ ಐ ಕೇರ್‌ನ’ ವೈದ್ಯ ತಂಡ ಹಾಗೂ ಎ.ಬಿ.ಶೆಟ್ಟಿ ಮೆಡಿಕಲ್ ಕಾಲೇಜ್ ವೈದ್ಯರುಗಳ ಆಗಮನ ವಿಶೇಷ ಮಹತ್ವ ನೀಡಿತ್ತು. ಪದವಿ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು. ಬೆಳಿಗ್ಗೆ ೧೦ ಗಂಟೆಗೆ ಆರಂಭವಾದ ಶಿಬಿರವು ಮಧ್ಯಾಹ್ನ ೧ ಗಂಟೆಗೆ ಸಮಾಪ್ತವಾಯಿತು. ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯವಾಯಿತು.