ಜೀವನ ರೂಪಿಸುವ ಪ್ರಾಚೀನ ಭಾರತೀಯ ಶಿಕ್ಷಣ – ಶ್ರೀ ರಾಧಾಕೃಷ್ಣ

ಶ್ರೀ ಭಾರತೀ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ದಿನಾಂಕ ೨೫.೦೭.೨೦೧೨ರಂದು ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್. ದಕ್ಷಿಣಕನ್ನಡ ಜಿಲ್ಲಾ ಕಾರ್ಯವಾಹರಾದ ಶ್ರೀ ರಾಧಾಕೃಷ್ಣ ಅವರು ಭಾಗವಹಿಸಿ ಮಾತನಾಡಿದರು.


“ಪ್ರಾಚೀನ ಭಾರತೀಯ ಶಿಕ್ಷಣವು ಜೀವನವನ್ನು ರೂಪಿಸುವಂತಹುದಾಗಿತ್ತು. ಆಧುನಿಕ ಶಿಕ್ಷಣವು ಇದರಿಂದ ವಂಚಿತವಾಗಿ ನಕ್ಸಲೈಟ್ ಸಮಸ್ಯೆ, ಭ್ರಷ್ಟಾಚಾರ ಮೊದಲಾದ ಪಿಡುಗಿಗೆ ಕಾರಣವಾಗಿದೆ. ಅದೇ ರೀತಿ ವಿಶ್ವದ ಕೆಲವು ಕಡೆ ದೇಶಗಳಿವೆ. ಆ ದೇಶಗಳಿಗೆ ಸಂಸ್ಕೃತಿಯಿಲ್ಲ. ಕೆಲವುದಕ್ಕೆ ಸಂಸ್ಕೃತಿಯಿದೆ ಆದರೆ ದೇಶವಿಲ್ಲ. ಭಾರತಕ್ಕೆ ದೇಶ ಮತ್ತು ಸಂಸ್ಕೃತಿ ಎರಡೂ ಇದೆ” ಎಂದು ನುಡಿದರು. ಈ ದೇಶದ ಸಂಸ್ಕೃತಿಯನ್ನು ಉಳಿಸಬೇಕೆಂದು ಅವರು ಯುಜನತೆಗೆ ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎನ್ ಭಟ್ ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Highslide for Wordpress Plugin