ಶ್ರೀ ಭಾರತೀ ಕಾಲೇಜಿನಲ್ಲಿ ಧರ್ಮಶಾಸ್ತ್ರ ಗೋಷ್ಠಿ

ಎಲ್ಲಾ ಜೀವರಾಶಿಗಳಿಗೆ ನೆಮ್ಮದಿಯನ್ನುಂಟು ಮಾಡುವ ಮಾತು ಹಾಗೂ ಆಚರೆಣೆಗಳು ಸತ್ಯ ಮತ್ತು ನಾವು ಯಾವುದನ್ನು ಮಾಡಬೇಕೋ ಅದು ಧರ್ಮ. –    ಡಾ. ವಿದ್ವಾನ್ ಟಿ.ವಿ. ಸತ್ಯನಾರಾಯಣ ತಲಕಾಡು

ಯಾವುದನ್ನು ಹೇಳಿದರೆ, ಯಾವುದನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆಯೋ, ನಮಗೆ ಹಾಗೂ ಇತರರಿಗೆ ತೊಂದರೆ ಆಗುವುದಿಲ್ಲವೋ ಅದು ಧರ್ಮ ಎಂದು ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ದಶಮಾನೋತ್ಸವ ವಿಶೇಷ ಕಾರ್ಯಕ್ರಮದ ಅಂಗವಾಗಿ ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರದ ಅಧೀನದಲ್ಲಿ ದಿನಾಂಕ ೨೯.೧೨.೨೦೧೨ ರಂದು ಐದು ಗೋಷ್ಠಿಗಳ ಸರಣಿಯಲ್ಲಿ ಧರ್ಮಶಾಸ್ತ್ರ ಗೋಷ್ಠಿಯಲ್ಲಿ ಧರ್ಮಶಾಸ್ತ್ರಗಳ ವ್ಯಾಪ್ತಿ ಔಚಿತ್ಯ ಮತ್ತು ವಿಶ್ಲೇಷಣೆಯ ಕುರಿತು ಪ್ರಬಂಧವನ್ನು ಮಂಡಿಸಿದ ವಿದ್ವಾನ್ ಟಿ.ವಿ. ಸತ್ಯನಾರಾಯಣ ತಲಕಾಡು ನಿವೃತ್ತ ಉಪನಿರ್ದೇಶಕರು ಪ್ರಾಚ್ಯ ವಸ್ತು ಸಂಶೋಧನಾ ಕೇಂದ್ರ ಮೈಸೂರು, ಇವರು ನುಡಿದರು. ಬೆಂಗಳೂರಿನ ವೇದ ವಿಜ್ಞಾನ ಗುರುಕುಲದ ಪ್ರಾಚಾರ್ಯರಾದ ವಿದ್ವಾನ್ ಮಹಾಬಲೇಶ್ವರ ಭಟ್ ಅವರು ಧರ್ಮಶಾಸ್ತ್ರೀಯ ಪರಿಭಾಷೆಗಳ ಪುನರ್ವ್ಯಾಖ್ಯಾನ ಎಂಬ ವಿಷಯದ ಕುರಿತು ಮಾತನಾಡುತ್ತಾ ನಮ್ಮನ್ನು  ಸಮರ್ಥಿಸಲು, ಇತರರ ತಪ್ಪುಗಳನ್ನು ಎತ್ತಿ ತೋರಿಸಲು ಧರ್ಮಶಾಸ್ತ್ರದ ದುರ್ಬಳಕೆಯಾಗುತ್ತಿದೆ. ಉತ್ತಮ ವಿಚಾರಗಳನ್ನು ಗೌರವಿಸಲು ಧರ್ಮಶಾಸ್ತ್ರಗಳ ಸದ್ಬಳಕೆಯಾಗಬೇಕೆಂದು ಹೇಳಿದರು.

ಈ ಗೋಷ್ಠಿಯನ್ನು ವಿದ್ವಾನ್ ನಿಟಿಲಾಪುರ ಕೃಷ್ಣಮೂರ್ತಿಯವರು ದೀಪಜ್ವಾಲನೆಯ ಮೂಲಕ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯರು ಮತ್ತು  ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ಜಿ.ಎನ್ ಭಟ್ ಇವರು ಅತಿಥಿಗಳನ್ನು ಸ್ವಾಗತಿಸಿದರು.

Highslide for Wordpress Plugin